ಭಾರತ, ಮಾರ್ಚ್ 7 -- Karnataka Budget: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಬಾಲೆನ್ಸ್ ಕಳೆದುಕೊಂಡಿರುವ ಬರೀ ಬಾಲೆನ್ಸ್ ಶೀಟ್ ಆಗಿದ್ದು, ಒಂದು ವರ್ಗದವರ ಓಲೈಕೆಗಾಗಿಯೇ ಭರಪೂರ ಕೊಡುಗೆಗಳನ್ನು ನೀಡಿರುವ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಟೀಕಿಸಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಗ್ಯಾರಂಟಿಗಳಿಗೆ ನೀಡಿದ ಭರವಸೆಯಂತೆ, ನಿರುದ್ಯೋಗಿ ಭತ್ಯೆ, ಗೃಹಲಕ್ಷ್ಮಿ ಹಣವನ್ನೇ ಬಿಡುಗಡೆ ಮಾಡಲು ಪರದಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ 4 ಲಕ್ಷ ಕೋಟಿ ರೂ.ಗಳ ಅತಿದೊಡ್ಡ ಬಜೆಟ್ ಮಂಡಿಸಿ,1,16,000 ಕೋಟಿ ಸಾಲದ ಹೊರೆಯನ್ನು ಜನಸಾಮಾನ್ಯರ ಮೇಲೆ ಹೊರಿಸಿದ್ದಾರೆ. ಮತ್ತೊಂದೆಡೆ ಅಲ್ಪ ಸಂಖ್ಯಾತರ ಹೆಸರಿನಲ್ಲಿ ವಕ್ಫ್ ಆಸ್ತಿಗಳ ರಕ್ಷಣೆಗೆ 150 ಕೋಟಿ ರೂ., ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಕೇಂದ್ರ ಸ್ಥಾಪನೆ, 100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ರೂ. ಅನುದಾನ, ಅಲ್ಪಸಂಖ್ಯಾತ ಕಾಲೋನಿ...