Bangalore, ಮಾರ್ಚ್ 22 -- ಮೈಸೂರು ಪ್ರವಾಸಿಗರ ನಗರಿ. ವಾರಾಂತ್ಯ ರಜೆ ಇದ್ದುದರಿಂದ ಪ್ರವಾಸಿಗರು ಅರಮನೆಗೆ ಆಗಮಿಸಿದರೂ ಸಂಖ್ಯೆ ಕೊಂಚ ಕಡಿಮೆಯೇ ಇತ್ತು.

ಬೆಂಗಳೂರಿನಲ್ಲಿ ಟೌನ್‌ ಹಾಲ್‌ ವೇಳೆ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಸಾರಾ ಗೋವಿಂದು ಮತ್ತಿತರರು ಪೊಲೀಸರು ಬಂಧಿಸಿದರು.

ಚಿಕ್ಕಮಗಳೂರಿನ ಬಸ್‌ ನಿಲ್ದಾಣದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ ಆಕ್ರೋಶ ಹೊರ ಹಾಕಿದರು.

ಬೆಳಗಾವಿಯ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ರಾಯಚೂರಿನಲ್ಲಿ ಬಂದ್‌ಗೆ ನಿರೀಕ್ಷಿತ ಬೆಂಬಲ ಇರಲಿಲ್ಲ.ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತೆ ಇತ್ತು.

ಮಂಗಳೂರು ನಗರದಲ್ಲಿ ಬಂದ್‌ನ ಬಿಸಿ ಇರಲಿಲ್ಲ.ಬೆಳಿಗ್ಗೆಯಿಂದಲೇ ನಗರದಲ್ಲಿ ವಾಹನ ಸಂಚಾರ ಯಥಾರೀತಿಯಾಗಿತ್ತು.

ಬೆಂಗಳೂರು ನಗರದಲ್ಲಿ ಬಂದ್‌ ಹಿನ್ನೆಲೆಯಲ್ಲಿ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನಿಂದಲೇ ಭಾರೀ ಪೊಲೀಸ್‌ ಭದ್ರತೆ ಹಾಕಲಾಗಿತ್ತು.

ಬೆಂಗಳೂರಿನ ಟೌನ್‌ ಹಾ...