ಭಾರತ, ಮಾರ್ಚ್ 22 -- ಬೆಂಗಳೂರು: ಕನ್ನಡಿಗರ ಮೇಲಾಗುವ ಹಿಂಸಾಚಾರ ತಡೆ, ರಾಜ್ಯದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು (ಮಾರ್ಚ್ 22) ಕರ್ನಾಟಕ ಬಂದ್ ನಡೆದಿದ್ದು, ರಾಜ್ಯದೆಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕೆಲವೆಡೆ ಧರಣಿಗಳು ನಡೆದವು. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಲು ಮುಂದಾದಾಗ ವಾಟಾಳ್ ನಾಗರಾಜ್‌ ಹೈಡ್ರಾಮ್ ನಡೆಸಿದ್ದು ಕಂಡುಬಂದಿತು. ಆರಂಭದಲ್ಲಿ ಪ್ರತಿಭಟನಾಕಾರರನ್ನು ಬಂಧಿಸುವ ಸೂಚನೆ ಇದ್ದರೂ, ಯಾರನ್ನೂ ಬಂಧಿಸಲಿಲ್ಲ. ಬದಲಾಗಿ ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡುತ್ತಿರುವವರನ್ನು ಬಸ್‌ನಲ್ಲಿ ತುಂಬಿಕೊಂಡು ಬಂದು ಟೌನ್‌ಹಾಲ್ ಬಳಿ ಇಳಿಸಲಾಯಿತು.

ಕರ್ನಾಟಕ ಬಂದ್‌ ಹಾಗೂ ಪ್ರತಿಭಟನಾಕಾರರ ಬಂಧನದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ 12 ಗಂಟೆಗಳ ಬಂದ್‌ನಲ್ಲಿ ...