Bengaluru, ಏಪ್ರಿಲ್ 12 -- Caste Census Report: ಕರ್ನಾಟಕ ಜಾತಿ ಗಣತಿ ವರದಿ ಕುರಿತಾದ ಅಸಮಾಧಾನ, ಆಕ್ಷೇಪಣೆಗಳು ತೀವ್ರಗೊಂಡಿರುವಾಗಲೇ ನಿನ್ನೆ (ಏಪ್ರಿಲ್ 11) ಸಚಿವ ಸಂಪುಟ ಸಭೆಯಲ್ಲಿ ಸಚಿವರ ಕೈ ಸೇರಿದೆ. ಈ ಸಚಿವ ಸಂಪುಟ ಸಭೆಗೆ 6 ಸಚಿವರು ಗೈರಾಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ, ಜಾತಿ ಗಣತಿ ವರದಿ ಕುರಿತಾಗಿ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಜಾತಿ ಗಣತಿ ವರದಿಯನ್ನು ಸರ್ಕಾರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಎಂದು ಹೇಳಿದ್ದು, ಏಪ್ರಿಲ್ 17ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅದರ ಭವಿಷ್ಯ ನಿರ್ಧರಿಸುವ ಸಾಧ್ಯತೆ ಇದೆ.

ಸಿದ್ದರಾಮಯ್ಯನವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಸಮೀಕ್ಷೆಯ ಹೊಣೆಯನ್ನು ವಹಿಸಿದ್ದರು. ನಂತರ ಇದನ್ನು ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಮುಂದುವರಿಸಿದ್ದು, ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿಯನ್ನು 2024ರ ಫೆಬ್ರವರಿಯಲ್ಲಿ ಈಗಿನ ...