ಭಾರತ, ಫೆಬ್ರವರಿ 9 -- ಅತ್ತ ಪ್ರಯಾಗ್‌​ರಾಜ್‌​​ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಕೋಟ್ಯಂತರ ಭಕ್ತರು ದೇಶ-ವಿದೇಶಗಳಿಂದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ. ಪುಣ್ಯಸ್ನಾನಕ್ಕಾಗಿ ದೂರದ ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದವರಿಗೆ ಕರ್ನಾಟಕದ ಕುಂಭಮೇಳ ಕೈಬೀಸಿ ಕರೆಯುತ್ತಿದೆ. ಅದು ಕೂಡಾ ನಮ್ಮ ಕರ್ನಾಟಕದಲ್ಲಿಯೇ ಕುಂಭಮೇಳ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯ ತಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ (ಫೆ.10) 3 ದಿನಗಳ ಕಾಲ ಅದ್ಧೂರಿ ಕುಂಭಮೇಳ ನಡೆಯುತ್ತಿದ್ದು, ಅಂತಿಮ ಹಂತದ ಸಿದ್ಧತೆ ನಡೆದಿದೆ. ತಿ. ನರಸೀಪುರದ ತಿರುಮಕೂಡಲಿಗೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಜನರು ಕೂಡಾ ಮೈಸೂರು ಕುಂಭಮೇಳಕ್ಕೆ ಬರುವ ನಿರೀಕ್ಷೆ ಇದೆ.

ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿಯಾಗಿರುವ ಸ್ಫಟಿಕ ಸರೋವರ ಸಂಗಮವಾಗುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮಾಘಮಾಸದ ಪುಣ್ಯಸ್ನಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಸಚಿವ ಡಾ ಹೆಚ್. ಸಿ‌ ಮಹದೇವಪ್ಪ ನಾಳೆ 13ನೇ ಕುಂಭಮೇಳಕ್ಕೆ ಚಾಲನ...