Bangalore, ಮೇ 1 -- ಬೆಂಗಳೂರು: ಕರ್ನಾಟಕ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಡಿ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ್ದ 2025 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ(Karnataka SSLC Results 2025) ಫಲಿತಾಂಶ ಪ್ರಕಟಣೆಗೆ ಕ್ಷಣ ಗಣನೆ ಶುರುವಾಗಿದೆ. ಕಳೆದ ತಿಂಗಳೇ ಪರೀಕ್ಷೆಗಳು ಮುಗಿದು ಆನಂತರ ಮೌಲ್ಯಮಾಪನ ಕಾರ್ಯವೂ ಮುಕ್ತಾಯಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಣೆ ಮಾತ್ರ ಈಗ ಬಾಕಿಯಿದೆ. ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಕೂಡ ಫಲಿತಾಂಶ ಪ್ರಕಟಿಸಲು ಸಿದ್ದತೆ ಮಾಡಿಕೊಂಡಿದೆ. ಮಂಡಳಿ ಮೂಲಗಳ ಪ್ರಕಾರ ಮೇ 3 ರ ಶನಿವಾರದಂದು ಫಲಿತಾಶವನ್ನು ಪ್ರಕಟಣೆ ಮಾಡಿ ಆನಂತರ ಆನ್‌ಲೈನ್‌ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಂದೇ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ.

Published by HT Digital Content Services with permission from HT Kannada....