ಭಾರತ, ಮೇ 6 -- ಇದನ್ಎನೂ ಓಸ್​ಎಸ್​ಎಲ್​ಸಿ ಮುಗೀತು, ಇನ್ನೇನಿದ್ದರೂ ಮಗ/ಮಗಳನ್ನು ಒಂದೊಳ್ಳೆ ಕಾಲೇಜಿಗೆ ಸೇರಿಸುವುದೇ ಪೋಷಕರ ಅತಿ ದೊಡ್ಡ ಜವಾಬ್ದಾರಿ. ಮಕ್ಕಳು ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಆ ವಿಷಯದಲ್ಲಿ ಶಿಕ್ಷಣ ಕೊಡಿಸಲು ಕಾಯುತ್ತಿದ್ದಾರೆ. ಯಾವ ಕಾಲೇಜಿಗೆ ಸೇರಿಸಬೇಕು ಎನ್ನುವುದು ಕೂಡ ದೊಡ್ಡ ಪ್ರಶ್ನೆ. ಪ್ರವೇಶಾತಿ ಆರಂಭವಾಗದ ಕಾರಣ ಭವಿಷ್ಯದ ಉದ್ದೇಶಕ್ಕಾಗಿ ಯಾವ ವಿಷಯ, ಯಾವ ಕಾಲೇಜಿನಲ್ಲಿ ಮಕ್ಕಳನ್ನು ಓದಿಸಿದರೆ ಉತ್ತಮ ಎಂದು ತಮ್ಮ ಚಿರಪರಿಚಿತರಲ್ಲಿ ವಿಚಾರಿಸುತ್ತಿದ್ದಾರೆ. ಅಂತಹ ಪೋಷಕರಿಗೆ ಉಪಯೋಗವಾಗುವ ಒಂದಿಷ್ಟು ಬೆಸ್ಟ್​ ಪಿಯು ಕಾಲೇಜುಗಳ ಪಟ್ಟಿ ಇಲ್ಲಿದೆ. ಇಲ್ಲಿ ನೀಟ್, ಜೆಇಇ ಮತ್ತು ಹಾಸ್ಟೆಲ್ ಸೌಲಭ್ಯಗಳೂ ಇವೆ.

ಹಿಂದೆಲ್ಲಾ ಯಾವುದೋ ಒಂದು ಕಾಲೇಜಿಗೆ ಸೇರಿಸಿದರೆ ಸಾಕಿತ್ತು. ಆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ಅರಿಯುವುದು ಮುಖ್ಯ. ವಿದ್ಯಾರ್ಥಿಯು ಪ್ರಿ-ಯೂನಿವರ್ಸಿಟಿ ಶಿಕ್ಷಣಕ್ಕೆ ಉತ್ತಮ ಸಂಸ್ಥೆ ಆಯ್ಕೆ ಮಾಡುವುದರ ಜೊತೆಗೆ ನೀಟ್ (NEET), ಜೆಇಇ (JEE), ಸಿಎ (CA) ಮತ...