Bangalore, ಜೂನ್ 6 -- ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಆನಂತದ ಕಾಲ್ತುಳಿತದ ಪ್ರಕರಣದಲ್ಲಿ ಹನ್ನೊಂದು ಯುವಕರ ಬಲಿ, ಇದಕ್ಕೆ ಬೆಂಗಳೂರು ನಗರ ಪೊಲೀಸ್‌ ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂದು ಅಮಾನತು ಮಾಡಿದಂತಹ ಕ್ರಮಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ದಯಾನಂದ್‌ ಅವರನ್ನು ಅಮಾನತು ಮಾಡಿದ ಕ್ರಮದ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿವೆ. ಬಹುತೇಕರು ಅವರ ಅಮಾನತು ಆದೇಶ ವಾಪಸ್‌ ಪಡೆಯಬೇಕು ಎನ್ನುವ ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತು ಕರ್ನಾಟಕದ ಹಿರಿಯ ಪತ್ರಕರ್ತರಾದ ಜಗದೀಶ್‌ ಕೊಪ್ಪ, ದಯಾಶಂಕರ ಮೈಲಿ ಹಾಗೂ ಮುತ್ತು ನಾಯ್ಕರ್‌ ಅವರು ಸರ್ಕಾರದ ಕ್ರಮವನ್ನು ಟೀಕಿಸಿದ್ದೂ ಅಲ್ಲದೇ ಅಮಾನತು ರದ್ದುಪಡಿಸಬೇಕು ಎನ್ನುವ ಆಗ್ರಹವನ್ನೂ ಮಾಡಿದ್ದಾರೆ.

ಮೊನ್ನೆ ಬುಧವಾರ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ. ಅಭಿಮಾನಿಗಳು ಎಂಬ ಹುಚ್ಚರ ಸಂತೆಯಲ್ಲಿ ನಡೆದ ಕಾಲ್ತುಳಿತದ ಪ್ರಕರಣದಲ್ಲಿ ನೇರ ನೈತಿಕ ಹೊಣೆ ಹೊರಬೇಕಾದದ್ದು ಕರ್ನಾಟಕ ಸರ್ಕಾರವೇ ಹೊರತು ಕರ್ನಾಟಕ ಪೊಲೀಸ್ ...