ಭಾರತ, ಮಾರ್ಚ್ 30 -- Karnataka Weather: ಯುಗಾದಿ ದಿನವಾದ ಇಂದು (ಮಾರ್ಚ್ 30) ಕರ್ನಾಟಕದ ಬಹುತೇಕ ಕಡೆ ಒಣ ಹವೆ, ಸುಡು ಬಿಸಿಲು ಅನುಭವಕ್ಕೆ ಬರಲಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ, ಉಷ್ಣದ ಅಲೆಗಳು ಅನುಭವಕ್ಕೆ ಬಂದರೆ, ದಕ್ಷಿಣ ಕನ್ನಡ, ಮೈಸೂರು ಸೇರಿ 4 ಜಿಲ್ಲೆಗಳಲ್ಲಿ ಕೆಲವೆಡೆ ಗುಡುಗು ಮಿಂಚು ಹಾಗೂ ಬೀಸುಗಾಳಿ ಸಹಿತ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.
ಬೆಂಗಳೂರು ನಗರ ವ್ಯಾಪ್ತಿಯ ಹವಾಮಾನ ಇಂದು ಬಹುತೇಕ ಒಣಹವೆ ಇರಲಿದೆ. ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ಆಸುಪಾಸು ಇರುವ ಕಾರಣ ಹಗಲು ಹೊತ್ತಿನಲ್ಲಿ ಸುಡುಬಿಸಿಲು ಕಾಡಬಹುದು. ಇನ್ನು, ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು. ನಿನ್ನೆ (ಮಾರ್ಚ್ 29) ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 34.1 ಡಿಗ್ರಿ ಸೆಲ್ಶಿಯಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.