Bangalore, ಮೇ 21 -- ಬೆಂಗಳೂರು: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕನ್ನಡಿಗ ಡಾ.ಎಂ.ಎ.ಸಲೀಂ ಅವರು ಮೇ 21ರ ಬುಧವಾರವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಲೀಂ ಅವರು ಸದ್ಯ ಹಂಗಾಮಿ ಡಿಜಿಪಿಯಾಗಿರಲಿದ್ದು, ಎರಡು ತಿಂಗಳ ಬಳಿಕ ಕಾಯಂ ಆಗಿ ನೇಮಕಗೊಳ್ಳಲಿದ್ದಾರೆ. ಹಾಲಿ ಡಿಜಿಪಿಯಾಗಿರುವ ಡಾ.ಅಲೋಕ್‌ಮೋಹನ್ ಅವರ ಅವಧಿ ಬುಧವಾರವೇ ಮುಗಿಯಲಿದ್ದು, ಅವರಿಗೆ ಗೌರವ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿದೆ. ಇದಾದ ಬಳಿಕ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸಲೀಂ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲೋಕ್ ಮೋಹನ್ ಅವರ ಅವಧಿ ಏಪ್ರಿಲ್‌ಗೆ ಮುಗಿದಿತ್ತಾದರೂ ಡಿಜಿಪಿಯಾಗಿ ಎರಡು ವರ್ಷದ ಅವಧಿ ಮುಗಿಸುವ ಉದ್ದೇಶದಿಂದ ಮೂರು ವಾರಗಳ ಕಾಲ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಸದ್ಯ ಸಲೀಂ ಅವರು ಸಿಐಡಿ ವಿಭಾಗದ ಪೊಲೀಸ್ ಮಹಾನಿರ್ದೇಶಕರು. ಎರಡು ದಶಕದ ಬಳಿಕ ಕನ್ನಡಿಗರೊಬ್ಬರು ಪೊಲೀಸ್ ಮಹಾನಿರ್ದೇಶಕ ಹುದ್ದೆಯನ್ನು ಕರ್ನಾಟಕದಲ್ಲಿ ವಹಿಸಿಕೊಳ್ಳಲಿದ್ಧಾರೆ ಎಂದು ಉನ್ನತ ಮೂಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.