ಭಾರತ, ಮಾರ್ಚ್ 6 -- ಬೆಂಗಳೂರು: ಕರ್ನಾಟಕದ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಗಳಿಂದ ಹಗಲಲ್ಲೇ ನಿರಂತರ 7 ಗಂಟೆ 3 ಪೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇಲ್ಲದಿರುವ ವಿದ್ಯುತ್ ಉಪ ಕೇಂದ್ರಗಳಿಂದ ಪಾಳಿಯಲ್ಲಿ ಹಗಲಿನ ವೇಳೆಯಲ್ಲಿ 4 ಗಂಟೆ ಹಾಗೂ ರಾತ್ರಿಯ ವೇಳೆಯಲ್ಲಿ 3 ಗಂಟೆ ಒಟ್ಟು 7 ಗಂಟೆ 3 ಪೇಸ್ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ಕೃಷಿ ಫೀಡರ್‌ಗಳಿಗೆ ಹಗಲಲ್ಲೇ 7 ಗಂಟೆ ನಿರಂತರವಾಗಿ 3 ಪೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಕೆಜೆ ಜಾರ್ಜ್‌ ಉತ್ತರಿಸಿದರು. ಫಾರ್ಮ್ ಹೌಸ್‌ಗಳನ್ನು ಹೊಂದಿರುವ ಎಲ್ಲಾ ಕೃಷಿ ಪೀಡರ್‌ಗಳಿಗೆ ಒಎಲ್‍ಪಿ-ರಿಲೇಗಳ್ನು ಬಳಸಿಕೊಂಡು ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಸಿಂಗಲ್ ಫೇಸ...