ಭಾರತ, ಮಾರ್ಚ್ 7 -- ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಅವರು 16ನೇ ಬಜೆಟ್ ಮಂಡಿಸಿದ್ದು, ದಾಖಲೆ ನಿರ್ಮಿಸಿದ್ದಾರೆ. ಬಜೆಟ್ ಜೊತೆಗೆ ಬಜೆಟ್ ಪುಸ್ತಕವು ಗಮನ ಸೆಳೆದಿದೆ. ಇದರಲ್ಲಿ ರಾಜ್ಯದ ಶ್ರೀಮಂತ ಶಿಲ್ಪಕಲೆ ಹಾಗೂ ವಾಸ್ತುಶಿಲ್ಪದ ವೈಭವವನ್ನು ಕಾಣಬಹುದಾಗಿದೆ.

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಬಜೆಟ್ ಪುಸ್ತಕವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಕರ್ನಾಟಕ ಶ್ರೀಮಂತ ಕಲೆ ಪರಂಪರೆಯನ್ನು ಬಂಬಿಸುವಂತಿದೆ.

2025-26ನೇ ಸಾಲಿನ ಬಜೆಟ್ ಅನ್ನು 4.095 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದ್ದು, ಇದು ಹಿಂದಿನ ವರ್ಷದ ಬಜೆಟ್ ಅಂದಾಜುಗಳಿಗಿಂತ (BE) ಶೇ 10.3 ರಷ್ಟು ಹೆಚ್ಚಾಗಿದೆ. ಬಜೆಟ್ ಮೂಲಸೌಕರ್ಯ, ಸಾಮಾಜಿಕ ಕಲ್ಯಾಣ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ, ಪ್ರಮುಖ ವಲಯಗಳಲ್ಲಿ ಗಣನೀಯ ಹಂಚಿಕೆಗಳನ್ನು ಹೊಂದಿದೆ.

ಇದನ್ನೂ ಓದಿ: Karnataka Budget 2025: ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕದ ಬಜೆಟ್‌ನಲ್ಲಿ ...