Bangalore, ಏಪ್ರಿಲ್ 10 -- ಬೆಂಗಳೂರು: ಕರ್ನಾಟಕದಲ್ಲಿ ಮೂರು ದಶಕದ ಹಿಂದೆ ಒಂದು ಲಕ್ಷಕ್ಕೂ ಅಧಿಕ ಪ್ರಾಥಮಿಕ ಶಿಕ್ಷಕರು ನೇಮಕಗೊಂಡರು. ಒಂದು ಪೈಸೆ ಲಂಚವನ್ನು ನೀಡದೇ ನಗರ ಪ್ರದೇಶವಲ್ಲದೇ ಗ್ರಾಮೀಣ ಭಾಗದ ವಿವಿಧ ಜಾತಿ, ಧರ್ಮದ ಶಿಕ್ಷಕರಿಗೆ ಉದ್ಯೋಗ ದೊರೆಯಿತು. ಅದರ ಹಿಂದೆ ಇದ್ದುದು ಮಲೆನಾಡು ಗಾಂಧಿ ಎಂದೇ ಹೆಸರಾಗಿದ್ದ ಎಚ್‌.ಜಿ.ಗೋವಿಂದೇಗೌಡ ಅವರು. ಶೃಂಗೇರಿ ಶಾಸಕರಾಗಿದ್ದ ಗೋವಿಂದೇಗೌಡರು ಎಚ್‌.ಡಿ.ದೇವೇಗೌಡರ ನಂತರ ಜೆಎಚ್‌ಪಟೇಲರ ಅವಧಿಯಲ್ಲೂ ಶಿಕ್ಷಣ ಸಚಿವರಾಗಿದ್ದರು. ಮೂರು ವರ್ಷದಲ್ಲಿ ಒಂದು ಲಕ್ಷ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡಲಾಯಿತು. ಅದು ಈಗಲೂ ದಾಖಲೆಯೇ ಆಗಿದೆ. ಈಗ ಕರ್ನಾಟಕದ ಮತ್ತೊಬ್ಬ ಸಚಿವ ದಕ್ಷತೆ ಜತೆಗೆ ಪ್ರಾಮಾಣಿಕತೆಯಿಂದಲೇ ಕಂದಾಯ ಸಚಿವರಾಗಿ ಸರ್ವೇಯರ್‌ಗಳನ್ನು ನೇಮಕ ಮಾಡಿದ್ದು, ಅವರೆಲ್ಲಾ ಸೇವೆಯಲ್ಲಿದ್ದಾರೆ.

ಕರ್ನಾಟಕದಲ್ಲಿ ಮಾದರಿಯಾಗಿ ಕೆಲಸ ಮಾಡಿದ ಇಬ್ಬರು ಸಚಿವರನ್ನು ನೆನಪಿಸಿಕೊಂಡವರು ಸಿಎಂ ಸಿದ್ದರಾಮಯ್ಯ. ಗೋವಿಂದೇಗೌಡರು ಪ್ರಾಮಾಣಿಕವಾಗಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ...