Bangalore, ಜುಲೈ 18 -- ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಪ್ರಾಯೋಜಕತ್ವ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಊರು ಜಾತ್ರೆ, ಹಬ್ಬದ ದಿನಗಳಲ್ಲಿ ನಡೆಯುವ ಹವ್ಯಾಸಿ ಬಯಲಾಟ ಪ್ರದರ್ಶನಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಆಯ್ದ ತಂಡಗಳ ಒಂದೊಂದು ಪ್ರದರ್ಶನಕ್ಕೆ ಅಕಾಡೆಮಿಯು ರೂ.25,000/-ಗಳ ಸಹಾಯಧನ ನೀಡಲಾಗುತ್ತದೆ.ಪ್ರಸಕ್ತ ವರ್ಷದಲ್ಲಿ 8 ಬಯಲಾಟ ತಂಡಗಳಿಗೆ ಪ್ರೋತ್ಸಾಹಧನ ಪಡೆದಿವೆ. ರಾಜ್ಯದ 21 ಜಿಲ್ಲೆಗಳಲ್ಲಿ ಬಯಲಾಟ ಕಲೆ ಅಸ್ತಿತ್ವದಲ್ಲಿದೆ. ದಕ್ಷಿಣದಲ್ಲಿ ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಉತ್ತರದಲ್ಲಿ ಬೀದರ್ ಜಿಲ್ಲೆಯವರೆಗೂ ಈ ಕಲೆ ವ್ಯಾಪಿಸಿದೆ. ಇಂತಹ ಕಲೆಯ ಪುನರುಜ್ಜೀವನಕ್ಕೆ ಹಾಗೂ ಬಯಲಾಟ ಕಲಾವಿದರಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಬಯಲಾಟ ಅಕಾಡೆಮಿ ಕ್ರಿಯಾ ಯೋಜನೆ ರೂಪಿಸಿದೆ.

ಬಯಲಾಟದ ಜೊತೆಗೆ ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟದ ಪ್ರಕಾರಗಳು ಬಯಲಾಟದ ಜೊತೆಯಲ್ಲಿಯೇ ಇವೆ. ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧನಾಟ ಎಂಬ ಪ್ರಕಾರಗಳು ಇವೆ. ಇಂದಿಗೂ ಈ ಕಲೆಗಳು ಗ್ರಾಮೀಣ ಪ್...