Bangalore, ಏಪ್ರಿಲ್ 2 -- ಮೈಸೂರಿನ ಅರಮನೆ ಎದುರು ದೇವರ ದಾಸಿಮಯ್ಯ ಜಯಂತಿಯ ಮೆರವಣಿಗೆ ಶಾಸಕ ಹರೀಶ್‌ ಗೌಡ ಚಾಲನೆ ನೀಡಿದರು. ಹಿರಿಯ ಕಾಂಗ್ರೆಸ್‌ ನಾಯಕ ಆರ್.ಮೂರ್ತಿ, ಮಾಜಿ ಮೇಯರ್‌ ಪುಷ್ಪಲತಾ ಜಗನ್ನಾಥ್‌, ನೇಕಾರ ಸಮುದಾಯದ ಯುವ ನಾಯಕ ಎಂ.ಎನ್‌.ಸತ್ಯಾನಂದ ವಿಟ್ಟು ಮತ್ತಿತರರು ಭಾಗಿಯಾದರು,

ಬೀದರ್‌ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಶ್ರೀ ದೇವರ ದಾಸಿಮಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ದೇವರ ದಾಸಿಮಯ್ಯ ಜಯಂತಿ ಪ್ರಯುಕ್ತ ಹಾಸನದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಕಳ ಕಛೇರಿಯಿಂದ ಕಲಾಭವನ ದವರೆಗೂ ನಡೆಯುವ ಮೆರವಣಿಗೆ ಕಾರ್ಯಕ್ರಮಕ್ಕೆ ಪುಷ್ಪಾರ್ಚನೆ ನೆರವೇರಿಸಿ ಚಾಲನೆ ನೀಡಲಾಯಿತು. ಶಾಸಕ ಸ್ವರೂಪ್‌ ಪ್ರಕಾಶ್‌, ಡಿಸಿ ಸತ್ಯಭಾಮ ಮತ್ತಿತರರು ಭಾಗಿಯಾದರು.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಆಡಳಿತ ವತಿಯಿಂದ ಶ್ರೀ ದೇವರ ದಾಸಿಮಯ...