Mysuru, ಫೆಬ್ರವರಿ 21 -- ಮೈಸೂರು: ಕರ್ನಾಟಕದಲ್ಲಿ ಹಿಂದೂ ಧರ್ಮಶಾಸ್ತ್ರ, ಆಗಮದ ಕುರಿತು ಶಾಸ್ತ್ರಬದ್ದವಾಗಿ ಶಿಕ್ಷಣ ಪಡೆಯಲು ಸಂಸ್ಥೆಗಳಿವೆ. ಇದಕ್ಕಾಗಿಯೇ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ಪರೀಕ್ಷೆಗಳು ನಡೆಸುತ್ತದೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣವಾದವರಿಗೆ ಘಟಿಕೋತ್ಸವವನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯಿಂದಲೇ ಆಯೋಜಿಸಿ ಪದವಿ ಹಾಗೂ ಪ್ರಮಾಣ ಪತ್ರ ವಿತರಿಸಲಾಗುತ್ತಿತ್ತು. 2007 ರಿಂದ ಆಗಮ ಘಟಿಕೋತ್ಸವ ನಾನಾ ಕಾರಣದಿಂದ ನಿಂತೇ ಹೋಯಿತು. ಉತ್ತೀರ್ಣರಾದವರು ಅಂಕ ಪಟ್ಟಿ ಪಡೆದರೂ ಪ್ರಮಾಣ ಪತ್ರ ಸಿಕ್ಕಿರಲಿಲ್ಲ. ಈ ವರ್ಷದಿಂದ ಧಾರ್ಮಿಕ ದತ್ತಿ ಸಚಿವ ಬಿ.ರಾಮಲಿಂಗಾರೆಡ್ಡಿ ಅವರು ಆಗಮ ಘಟಿಕೋತ್ಸವ ಕಡ್ಡಾಯವಾಗಿ ನಡೆಸುವಂತೆ ಸೂಚಿಸಿದ್ದರಿಂದ 17 ವರ್ಷಗಳ ನಂತರ ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಿತು. ಹಲವರು ತಮ್ಮ ಆಗಮ ಶಿಕ್ಷಣದ ಪ್ರಮಾಣಪತ್ರವನ್ನು ಪಡೆದುಕೊಂಡರು.

ಸಚಿವರು ಹೇಳಿದ್ದೇನು ...