Bengaluru, ಫೆಬ್ರವರಿ 28 -- Karnataka Bird Flu Alert: ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಹಕ್ಕಿ ಜ್ವರ ಉಲ್ಬಣಗೊಂಡಿರುವ ಕಾರಣ ಕಳೆದ ವಾರದಿಂದಲೇ ಕರ್ನಾಟಕದಲ್ಲಿ ಹಕ್ಕಿ ಜ್ವರದ ಭೀತಿ ಆವರಿಸಿತ್ತು. ಇದೀಗ, ಕರ್ನಾಟಕಕ್ಕೆ ಹಕ್ಕಿ ಜ್ವರ ಕಾಲಿಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರದ ಕಾರಣ ಗುರುವಾರ 2 ಕೋಳಿಗಳು ಮೃತಪಟ್ಟಿರುವುದು ಧೃಡಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂಸಿ ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ವರದಹಳ್ಳಿ ಗ್ರಾಮದಲ್ಲಿ ಸಾಕಿದ್ದ ನಾಟಿ ಕೋಳಿಗಳಲ್ಲಿ ಹಕ್ಕಿಜ್ವರ (Bird flu) ಪತ್ತೆಯಾಗಿದೆ. ಗುರುವಾರ ಕೂಡ 2 ಕೋಳಿಗಳು ಮೃತಪಟ್ಟಿವೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾಗಿ ಸುವರ್ಣ ನ್ಯೂಸ್ ವರದಿ ಮಾಡಿದೆ.

ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ, ಚಿಕ್ಕಬಳ್ಳಾಪುರ ತಾಲೂಕು ವರದಹಳ್ಳಿಯ ದ್ಯಾವಪ್ಪ ಮತ್ತು ರತ್ನಮ್ಮ ಸಾಕಿದ 36 ಕೋಳಿಗಳು ಶನಿವಾರ ರಾತ್ರಿ ಏಕಾಕಿಯಾಗಿ ಮೃತಪಟ್ಟಿದ್ದವು. ವಿಷಾ...