ಭಾರತ, ಮೇ 2 -- ಶಕ್ತಿ ಯೋಜನೆ: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಆದಾಯ ವೃದ್ಧಿಯಾಗಿದೆ. ಇದೇ ವೇಳೆ, ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ವಿಭಾಗಕ್ಕೆ ಆದಾಯ ನಷ್ಟವಾಗಿರುವುದು ಗಮನಸೆಳೆದಿದೆ. ಪ್ಯಾಸೆಂಜರ್‌ ಆದಾಯ ಬೆಳವಣಿಗೆಯ ದತ್ತಾಂಶಗಳು ಈ ವಿವರ ಬಹಿರಂಗಪಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಗುರುವಾರ (ಮೇ 1) ವರದಿ ಮಾಡಿದೆ.

ಕರ್ನಾಟಕ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ನೈಋತ್ಯ ರೈಲ್ವೆಯ ಪ್ರಯಾಣಿಕ ಆದಾಯ ಬೆಳವಣಿಗೆ ಕುಸಿತ ಕಂಡಿದೆ. 2022-23ಕ್ಕೆ ಹೋಲಿಸಿದರೆ ಶೇಕಡ 75, 2023-24ಕ್ಕೆ ಹೋಲಿಸಿದರೆ ಶೇಕಡ 12 ಮತ್ತು 2024-25ರಲ್ಲಿ ಶೇಕಡ 2.6 ಏರಿಕೆ ದಾಖಲಾಗಿರುವುದು ಕಂಡುಬಂದಿದೆ. ಇದೇ ವೇಳೆ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 2023ರ ಜೂನ್‌ನಲ್ಲಿ ಶಕ್ತಿ ಯೋಜನೆ ಘೋಷಣೆಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಅನುಕ್ರಮವಾಗಿ ಶೇಕಡ 40, ಶೇಕಡ 14 ಮತ್ತು ಶೇಕಡ 11 ಏರಿಕೆ ಕ...