Chitradurga, ಮಾರ್ಚ್ 28 -- ಕರ್ನಾಟ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರ ತಂಡ ಚಿತ್ರದುರ್ಗ ನಗರದ ಜಿಲ್ಲಾ ಆಸ್ಪತ್ರೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ, ನಗರ ಪೊಲೀಸ್ ಠಾಣೆ, ಜಿಲ್ಲಾ ಕಾರಾಗೃಹ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಾನವ ಹಕ್ಕುಗಳ ಆಯೋಗದ ಹೆಸರು ದುರ್ಬಳಕೆ ಮಾಡಿಕೊಂಡು, ಮಾನವ ಹಕ್ಕುಗಳ ಆಯೋಗದ ಚಿಹ್ನೆಯನ್ನೇ ಹೋಲುವ ರೀತಿಯಲ್ಲಿ ವಿಸಿಟಿಂಗ್ ಕಾರ್ಡ್, ಲೆಟರ್ ಹೆಡ್‍ಗಳನ್ನು ಮಾಡಿಕೊಂಡು ವಿವಿಧ ಸಂಘಟನೆಗಳು ಅಧಿಕಾರಿಗಳನ್ನು ಬೆದರಿಸುವ ಘಟನೆಗಳು ಜರುಗುತ್ತಿರುವುದಾಗಿ ದೂರುಗಳು ಕೇಳಿಬಂದಿವೆ ಎನ್ನುವುದು ಆಯೋಗದ ಅಧ್ಯಕ್ಷರ ವಿವರಣೆ.,

ಮಾನವ ಹಕ್ಕುಗಳು ಎನ್ನುವ ಶಿರ್ಷಿಕೆ ಇರುವ ಲೆಟರ್ ಹೆಡ್ ಹಾಗೂ ವಿಜಿಟಿಂಗ್ ಕಾರ್ಡುಗಳನ್ನು ಸಹ ಮುದ್ರಿಸಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಇವುಗಳನ್ನು ತಡೆಗಟ್ಟಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಠಿಣ ನಿಯಮಗಳ...