ಭಾರತ, ಏಪ್ರಿಲ್ 27 -- ಬೆಂಗಳೂರು: ಕರ್ನಾಟಕದಲ್ಲಿ ಸದ್ಯ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಇವುಗಳಲ್ಲಿ ಕೆಲವು ರೈಲುಗಳು ರಾಜ್ಯದೊಳಗೆ ಹಾಗೂ ಇನ್ನೂ ಕೆಲವು ರೈಲುಗಳು ರಾಜ್ಯದ ಪ್ರಮುಖ ನಗರಗಳನ್ನು ಇತರ ರಾಜ್ಯಗಳೊಂದಿಗೆ ಸಂಪರ್ಕಿಸುತ್ತವೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಕಲಬುರಗಿ, ಮಂಗಳೂರು ನಗರಗಳಿಗೆ ವಂದೇ ಭಾರತ್‌ ರೈಲು ಸಂಪರ್ಕಗಳಿವೆ. ಕರ್ನಾಟಕದ ರಾಜಧಾನಿ ಬೆಂಗಳೂರು ನಗರವನ್ನು ಹೆಚ್ಚು ರೈಲುಗಳು ಸಂಪರ್ಕಿಸುತ್ತವೆ. ರಾಜ್ಯದಲ್ಲಿ ಓಡಾಡುವ ಪ್ರಮುಖ ವಂದೇ ಭಾರತ್‌ ರೈಲುಗಳು, ನಿಲ್ದಾಣಗಳು, ಟಿಕೆಟ್‌ ದರ ಹಾಗೂ ಪ್ರಯಾಣಿಸುವ ದಿನಗಳು ಸೇರಿದಂತೆ ವಿವಿಧ ವಿವರಗಳು ಇಲ್ಲಿವೆ.

ಕಲಬುರಗಿಯಿಂದ ಹೊರಡುವ ಈ ವಂದೇ ಭಾರತ್ ರೈಲು ರಾಯಚೂರು ಜಂಕ್ಷನ್, ಮಂತ್ರಾಲಯ ರಸ್ತೆ, ಗುಂಟಕಲ್ ಜಂಕ್ಷನ್, ಅನಂತಪುರ ಮತ್ತು ಯಲಹಂಕ ಸೇರಿದಂತೆ ಐದು ನಿಲ್ದಾಣಗಳ ಮೂಲಕ ಬೆಂಗಳೂರು ಬರುತ್ತದೆ. 8 ಗಂಟೆ 45 ನಿಮಿಷಗಳಲ್ಲಿ 548 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಕಲಬುರಗಿಯಿಂದ ಶುಕ್ರವಾರ ಹೊರತುಪಡಿಸಿ ವಾರದ ಆರು ದಿನ ಈ ರೈಲು ಓ...