Bangalore, ಮೇ 17 -- ಕರ್ನಾಟಕದಲ್ಲಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ, ಮಳೆ ಚೆನ್ನಾಗಿ ಆಗುವ ಉತ್ತರ ಕನ್ನಡ ಜಿಲ್ಲೆಯು ಮುಂಗಾರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ಇಲ್ಲಿನ ಜಲಪಾತಗಳು, ಅರಣ್ಯದ ಹಸಿರು ಎಂಥವರಿಗೂ ಮುದ ನೀಡಬಲ್ಲದು.ಉತ್ತರ ಕನ್ನಡ ವಾರ್ಷಿಕ 2,835 ಮಿ.ಮೀ ನಷ್ಟು ಮಳೆಯಾಗುವ ಅಂದಾಜಿದೆ.

ದೇಗುಲ, ಬೀಚ್‌ಗಳ ಜತೆಗೆ ದಟ್ಟ ಹಸುರಿನ ಕಾಡು ಇರುವ ಉಡುಪಿ ಜಿಲ್ಲೆಯು ಕೂಡ ಮುಂಗಾರು ಹಂಗಾಮಿಗೆ ಅತ್ಯುತ್ತಮ ಪ್ರವಾಸಿ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕುಂದಾಪುರ, ಉಡುಪಿ, ಕಾರ್ಕಳ ತಾಲ್ಲೂಕುಗಳ ದಟ್ಟಾರಣ್ಯ,ಮಳೆ ಇದಕ್ಕೆ ಕಾರಣ. ಉಡುಪಿ ಜಿಲ್ಲೆಯ ಕೊಲ್ಲೂರು ಸುತ್ತಮುತ್ತಲ ಪ್ರದೇಶ ಸೇರಿ 4,119 ಮಿ.ಮೀ ಮಳೆ ವಾರ್ಷಿಕವಾಗಿ ಆಗುವ ಅಂದಾಜಿದೆ.

ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ವನ್ಯಜೀವಿಗಳಿಗೆ ಹೇಳಿ ಮಾಡಿಸಿದ ತಾಣ. ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಮಲೈಮಹದೇಶ್ವರ ಬೆಟ್ಟ,ಕಾವೇರಿ ವನ್ಯಧಾಮಗಳಲ್ಲಿ ಸಾಕಷ್ಟು ವನ್ಯಸಂತತಿ ಇದೆ. ಇಲ್ಲಿಯೂ ಉತ್ತಮ ಮಳೆಯಾಗುವುದರಿಂದ ಪ್ರವಾಸಿಗರು ಕಾಡಿನ ಜತೆಗೆ ವನ...