ಭಾರತ, ಜನವರಿ 30 -- ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ಸಮೀಪಿಸಿದ ಬೆನ್ನಲ್ಲೇ ಕರ್ನಾಟಕದ 23 ಜಿಲ್ಲೆಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷರನ್ನು (Karnataka BJP district President) ನೇಮಕಗೊಳಿಸಿ ರಾಜ್ಯ ಬಿಜೆಪಿ (BJP) ಆದೇಶ ಹೊರಡಿಸಿದೆ. ಕೆಲ ಜಿಲ್ಲೆಗಳಲ್ಲಿ ಹಳಬರನ್ನೇ ಮುಂದುವರೆಸಿದ್ದರೆ, ಕೆಲ ಜಿಲ್ಲೆಗಳಿಗೆ ಹೊಸಬರನ್ನು ನೇಮಿಸಲಾಗಿದೆ. ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸಲು ಮತ್ತು ಪಕ್ಷದ ವರ್ಚಸನ್ನು ಹೆಚ್ಚಿಸುವ ನಾಯಕರನ್ನೇ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರ ನೇಮಕದ ಪಟ್ಟಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ವಿಜಯೇಂದ್ರ ತನ್ನ ಆಪ್ತರಿಗೆ ಹೆಚ್ಚು ಮಣೆ ಹಾಕಿದ್ದಾರೆ ಎಂದು ಸ್ವಪಕ್ಷದಲ್ಲೇ ಆರೋಪ ಕೇಳಿ ಬಂದಿದೆ.

ಪಕ್ಷದ ಸಂಘಟನಾ ಪರ್ವದ ಭಾಗವಾಗಿ ರಾಜ್ಯದಲ್ಲಿ 23 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಆತ್ಮೀ...