ಭಾರತ, ಏಪ್ರಿಲ್ 28 -- ಪ್ರಸ್ತುತ ಕ್ರಿಕೆಟ್ ಜಗತ್ತಿನ ಕೇಂದ್ರಬಿಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆಗಿದ್ದರೂ ಭಾರತೀಯ ಕ್ರಿಕೆಟ್ ತಂಡದ ಒಂದು ಕಣ್ಣು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೇಲಿದೆ. ಜೂನ್ 20 ರಿಂದ ಬೆನ್ ಸ್ಟೋಕ್ಸ್ ನೇತೃತ್ವದ ತಂಡವನ್ನು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎದುರಿಸಲು ರಾಷ್ಟ್ರೀಯ ತಂಡ ಸಜ್ಜಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ನ ಫೈನಲ್ ಪಂದ್ಯ ಮುಗಿದ ಒಂದು ತಿಂಗಳೊಳಗೆ ಈ ಸರಣಿ ನಡೆಯಲಿದೆ. ರೋಹಿತ್​ ಶರ್ಮಾ ನಾಯಕನಾಗಿ ಮುಂದುವರೆಯಲಿದ್ದಾರೆ. ಆದರೆ ಇಲ್ಲಿನ ಪ್ರದರ್ಶನ ಅವರ ಟೆಸ್ಟ್ ಭವಿಷ್ಯವನ್ನು ರೂಪಿಸಲಿದೆ.

2024-25ರಲ್ಲಿ ಭಾರತದ ಟೆಸ್ಟ್ ಭೀಕರ ಸೋಲಿನ ನಂತರ, ರೋಹಿತ್ ಪಡೆಯ ಕೆಂಪು ಚೆಂಡಿನ ಕ್ರಿಕೆಟ್ ಅದೃಷ್ಟವು ಕಳವಳಕಾರಿಯಾಗಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ವೈಟ್​ವಾಶ್ ಮುಖಭಂಗ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (BGT) 3-1 ಅಂತರದ ಹೀನಾಯ ಸೋತಿದ್ದೇ ಉದಾಹರಣೆ. ಇದೀಗ ಇಂಗ್ಲೆಂಡ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಟೀಮ್ ಮ್ಯಾನೇಜ್​...