ಭಾರತ, ಮಾರ್ಚ್ 16 -- 18ನೇ ಆವೃತ್ತಿಯ ಐಪಿಎಲ್ ಬಳಿಕ ಭಾರತ ತಂಡ ಜೂನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳಲಿದೆ. 5 ಪಂದ್ಯಗಳ ವಿದೇಶಿ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ 4ನೇ ಆವೃತ್ತಿಯ ಆರಂಭಿಕ ಸರಣಿ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 1-3 ಅಂತರದ ಸೋಲು ಅನುಭವಿಸಿದ್ದ ಭಾರತ, ಮುಂಬರುವ ಸರಣಿಯಲ್ಲಿ ಪುಟಿದೇಳುವ ಗುರಿ ಹೊಂದಿದೆ. ಇಂಗ್ಲೆಂಡ್ ವಿರುದ್ದ ಕೊನೆಯ ಪ್ರವಾಸದಲ್ಲಿ ಭಾರತ 2-2ರಲ್ಲಿ ಸರಣಿ ಡ್ರಾ ಮಾಡಿಕೊಂಡಿತ್ತು. ಅದರಲ್ಲೂ ಕೊನೆ ಪಂದ್ಯದಲ್ಲಿ ಸೋತಿತ್ತು.

2021ರಲ್ಲಿ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಆಗ ಭಾರತ 2-1 ಮುನ್ನಡೆಯಲ್ಲಿತ್ತು. ಆ ಪಂದ್ಯವನ್ನು 2022ರ ಜುಲೈನಲ್ಲಿ ಆಯೋಜನೆ ಮಾಡಲಾಗಿತ್ತು. ಅಷ್ಟರೊಳಗೆ ವಿರಾಟ್ ಕೊಹ್ಲಿ ತನ್ನ ನಾಯಕತ್ವ ತ್ಯಜಿಸಿ ರೋಹಿತ್ ಶರ್ಮಾಗೆ ಹಸ್ತಾಂತರಿಸಿದ್ದರು. ಆದರೆ ಹಿಟ್​ಮ್ಯಾನ್​ ಆ ಪಂದ್ಯದಿಂದ ಹಿಂದೆ ಸರಿದಿದ್ದ ಕಾರಣ ಜಸ್ಪ್ರೀತ್ ಬುಮ್ರಾ ಅವರು ನಾಯಕತ್ವದ ಜವಾಬ್ದಾರಿ ಹೊತ್ತ...