Bengaluru, ಏಪ್ರಿಲ್ 1 -- ರವಿಚಂದ್ರನ್‌ ನಟನೆಯ ಬಹುತೇಕ ಸಿನಿಮಾಳಲ್ಲಿ ಟೈಟಲ್‌ ಕಾರ್ಡ್‌ ಪ್ರಮುಖ ಆಕರ್ಷಣೆ. ಕನ್ನಡ ಸಿನಿಮಾಗಳಲ್ಲಿ ವೈವಿಧ್ಯಮಯ, ಕ್ರಿಯೆಟಿವ್‌ ಟೈಟಲ್‌ ಕಾರ್ಡ್‌ಗಳನ್ನು ಇವರು ನೀಡುತ್ತಿದ್ದರು. ಅದು ಪುಟ್ನಂಜ ಆಗಿರಬಹುದು. ಗೋಪಿ ಕೃಷ್ಣ ಆಗಿರಬಹುದು. ಕಿಂದರಿಜೋಗಿ ಸಿನಿಮಾದ ಟೈಟಲ್‌ ಕಾರ್ಡ್‌ ಆಗಿರಬಹುದು. ಅತ್ಯಂತ ಡಿಫರೆಂಟ್‌ ಆಗಿ ಟೈಟಲ್‌ ಕಾರ್ಡ್‌ ನೀಡುತ್ತಾರೆ ರವಿಚಂದ್ರನ್‌. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಆಮಂತ್ರಣವೊಂದು ವೈರಲ್‌ ಆಗಿದೆ. ಕರಿಯಣ್ಣ, ಭೂಮಿಕಾ ಮದುವೆ ಆಮಂತ್ರಣ ಡಿಫರೆಂಟ್‌ ಆಗಿದೆ. ಇದು ರವಿಚಂದ್ರನ್ ಟೈಟಲ್ ಕಾರ್ಡ್ ಸ್ಟೈಲ್ ನಲ್ಲಿ ಮದುವೆ ಇನ್ವಿಟೇಶನ್ ಎಂದೇ ವೈರಲ್‌ ಆಗುತ್ತಿದೆ. ಬನ್ನಿ ಆ ಮದುವೆ ಆಮಂತ್ರಣ ಹೇಗಿದೆ ಎಂದು ನೋಡೋಣ.

ಮದುವೆ ಆಮತ್ರಣದ ರೀಲ್ಸ್‌ ಇದಾಗಿದೆ. ಹಿನ್ನೆಲೆಯಲ್ಲಿ ಬ್ಯಾಂಡ್‌ ಸದ್ದು ಪೋಷಕರು ಮೊದಲು "ಹೇಗಿದ್ದೀರಾ" ಎಂದು ಬರೆದ ಕಾರ್ಡ್‌ ಅನ್ನು ತೋರಿಸುತ್ತಾರೆ. ತಯಾರಾಗಿದ್ದೀರಾ? ಎಂದು ಬರೆದ ಕಾರ್ಡ್‌ ಅನ್ನು ಇನ್ನಿಬ್ಬರು ತೋರಿಸುತ್ತಾರೆ. "ಏನಕ್ಕ...