ಭಾರತ, ಫೆಬ್ರವರಿ 18 -- ಬೆಂಗಳೂರು: ಕರಾವಳಿ ಎಂದಾಕ್ಷಣ ನೆನಪಾಗುವುದು ಇಲ್ಲಿನ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳು ಹಾಗೂ ಆಹಾರಪದ್ಧತಿ. ತನ್ನ ವೈವಿಧ್ಯ ಪರಂಪರೆಯ ಮೂಲಕ ಗಮನ ಸೆಳೆಯುವ ಕರಾವಳಿಯ ಸೊಬಗನ್ನು ನೀವೂ ಕಣ್ತುಂಬಿಕೊಳ್ಳಲು ಬಯಸಿದರೆ ಕರಾವಳಿ ಉತ್ಸವಕ್ಕೆ ಭೇಟಿ ನೀಡಬೇಕು. ಫೆ. 25ರ ಭಾನುವಾರ ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್‌ ಬಿಬಿಎಂಪಿ ಆಟದ ಮೈದಾನದಲ್ಲಿ ಕರಾವಳಿ ಉತ್ಸವ ನಡೆಯುತ್ತಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮಗಳು ಆರಂಭವಾಗಲಿದೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ದಿನಗಣನೆ ಆರಂಭವಾಗಿದೆ.

ಕರಾವಳಿಗರ ಒಕ್ಕೂಟ (ರಿ) ಬೆಂಗಳೂರು ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯತ್ತಿದೆ. ʼನಮ್ಮ ಕರಾವಳಿ ಉತ್ಸವʼ ಎಂದು ಇದಕ್ಕೆ ಹೆಸರಿಡಲಾಗಿದೆ. ಕಡಲ ಕೆರೆಯ ಬದುಕು-ಬಣ್ಣ-ಭಾವ ಎಂಬುದು ಈ ಕಾರ್ಯಕ್ರಮದ ಟ್ಯಾಗ್‌ಲೈನ್‌. ಈ ಬಾರಿ ನಡೆಯುವ ಕರಾವಳಿ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕರಾವಳಿ ಉತ್ಸವದ ಅ...