Dakshina kannada, ಮಾರ್ಚ್ 11 -- ಮಂಗಳೂರು: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಮಿತಿಮೀರಿದೆ. ಕಾರ್ಮಿಕರು ಕೆಲಸ ಕಾರ್ಯ ನಡೆಸಲು ಪ್ರಯಾಸಪಡುತ್ತಿದ್ದರೆ, ಮಂಗಳವಾರ ಉಡುಪಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಯುವಕನೋರ್ವ ಕುಸಿದುಬಿದ್ದು ಸಾವನ್ನಪ್ಪಿದ್ದು, ಇದಕ್ಕೆ ಬಿಸಿಲಿನ ತಾಪವೇ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಕೂಲಿ ಕಾರ್ಮಿಕ ಬದಿಯಪ್ಪ (37) ನಿಂತುಕೊಂಡಿದ್ದವರು ಏಕಾಏಕಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಅಷ್ಟರಾಗಲೇ ಯುವಕ ಪ್ರಾಣಬಿಟ್ಟಿದ್ದಾನೆ. ಬಿಸಿಲಿನ ತಾಪದಿಂದ ಈ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಬಿಸಿಲಿನ ಝಳದ ಪರಿಣಾಮದ ಜೊತೆ ಈತನಿಗೆ ಬೇರೇನಾದರೂ ಕಾಯಿಲೆ ಇತ್ತೇ ಎಂಬುದನ್ನು ಇನ್ನೂ ಪೊಲೀಸರು ತಿಳಿಯಬೇಕಷ್ಟೇ....