ಭಾರತ, ಫೆಬ್ರವರಿ 26 -- ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಹಿತ ಕರಾವಳಿಯ ಪ್ರಮುಖ ಶಿವಸಾನಿಧ್ಯಗಳಲ್ಲಿ ಶಿವರಾತ್ರಿಯ ದಿನವಾದ ಇಂದು ವಿಶೇಷ ಪೂಜೆ, ರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಭಕ್ತರಿಂದ ಪಂಚಾಕ್ಷರಿ ಮಂತ್ರ ಪಠಣ, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗೋಕರ್ಣ ಶ್ರೀ ಮಹಾಬಲೇಶ್ವರ ಸನ್ನಿಧಿ, ಮುರ್ಡೇಶ್ವರ, ಉಡುಪಿಯ ಶಿವಾಲಯಗಳಲ್ಲಿ ಪ್ರಮುಖವಾದ ಚಂದ್ರಮೌಳೀಶ್ವರ ದೇವಸ್ಥಾನ, ದಕ್ಷಿಣ ಕನ್ನಡದ ಧರ್ಮಸ್ಥಳ, ಪುತ್ತೂರು, ಕದ್ರಿ, ಕುದ್ರೋಳಿ, ಸುಳ್ಯ, ಬಂಟ್ವಾಳ, ಕಾರಿಂಜ ಸಹಿತ ಹಲವು ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ, ಪುನಸ್ಕಾರಗಳು ನಡೆಯಲಿವೆ. ಈಗಾಗಲೇ ಮಾರುಕಟ್ಟೆಗಳಲ್ಲಿ ಬಿಲ್ವಪತ್ರೆ, ಎಕ್ಕದ ಹೂ, ಎಳೆನೀರು, ತುಳಸಿಮಾಲೆ, ಹೂವು ಹಣ್ಣು ಕಾಯಿಗಳಿಗೆ ಬೇಡಿಕೆ ಹೆಚ್ಚಿದೆ.

ಕಾರಿಂಜ ದೇವಸ್ಥಾನದಲ್ಲಿ ಜಾತ್ರೆ ಇದ್ದರೆ, ಧರ್ಮಸ್ಥಳ ಕ್ಷೇತ್ರದಲ್ಲಿ ಪಾದಯಾತ್ರಿಗಳ ಆಗಮನ ವಿಶೇಷ, ಸುಳ್ಯದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ, ಬೆಳ್ಳಾರೆ ಅಜಪಿಲ ದೇವಸ್ಥಾನ ಸಹಿತ ...