ಭಾರತ, ಮಾರ್ಚ್ 20 -- ಮಂಗಳೂರು: ಬಿಸಿಗಾಳಿ ದಿನೇ ದಿನೇ ಏರುತ್ತಿದೆ. ಕರಾವಳಿಯಲ್ಲಿ 40 ಡಿಗ್ರಿಯಷ್ಟು ತಾಪಮಾನ ಇದೀಗ ಎಲ್ಲರ ಚಿಂತೆಗೆ ಕಾರಣವಾಗುತ್ತಿದೆ. ಜಿಲ್ಲಾಡಳಿತವಂತೂ ಹಲವಾರು ಸೂಚನೆಗಳನ್ನು ನೀಡುವುದರ ಮೂಲಕ ಜಾಗ್ರತೆ ವಹಿಸುವಂತೆ ಕೋರಿದೆ. ಜಾಗ್ರತೆಯ ನಡುವೆ ಜಾಗೃತಿಯನ್ನೂ ಮೂಡಿಸುವ ಕೆಲಸವನ್ನು ಈ ಮಕ್ಕಳು ಮಾಡುತ್ತಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೊಡಂಕಾಪುವಿನಲ್ಲಿರುವ ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿಗಳು.

ಶಿಕ್ಷಕ ರೋಷನ್ ಪಿಂಟೋ ಅವರ ಪರಿಕಲ್ಪನೆಯ ಈ ಅಭಿಯಾನದ ಹೆಸರು ಚೀಂವ್ ಚೀಂವ್ ಅಭಿಯಾನ. ಬೇಸಗೆಯಲ್ಲಿ ನಾವು ಯಾರನ್ನಾದರೂ ನೀರು ಕೇಳಬಹುದು. ಆದರೆ ಹಾಗೆ ಮಾಡಲು ಸಾಧ್ಯವಾಗದ ಪಕ್ಷಿಗಳು ಏನು ಮಾಡಬೇಕು? ನೀರಿದ್ದಲ್ಲಿಗೆ ಹೋಗಬೇಕು. ಹೀಗಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಹಾಗೆ ನೋಡಿದರೆ, ಈ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ಹಕ್ಕಿಗಳಿಗೆ ನೀರಿಡುವ ಅಬಿಯಾನ ನಡೆಯುತ್ತಾ ಬಂದಿದೆ. ಆದರೆ ಈಗ ಹೀಟ್ ವೇವ್ ಆರಂಭಗೊಂಡ ಸಂದರ್ಭ, ನಮ್ಮಂತೆ ಹಕ್ಕಿಗಳೂ ಬದುಕಲಿ ಎ...