ಭಾರತ, ಮಾರ್ಚ್ 4 -- ಕನ್ಯಾ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಉತ್ತರ ನಕ್ಷತ್ರದ 2, 3 ಮತ್ತು 4ನೇ ಪಾದಗಳು, ಹಸ್ತ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಚಿತ್ತ ನಕ್ಷತ್ರದ 1 ಮತ್ತು 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕನ್ಯಾ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಟೊ, ಪ ಮತ್ತು ಪಿ ಆಗಿದ್ದರೆ ಉತ್ತರ ನಕ್ಷತ್ರ, ಪು, ಷ, ಣ ಮತ್ತು ಠ ಆದಲ್ಲಿ ಹಸ್ತ ನಕ್ಷತ್ರ ಹಾಗೂ ಪೆ, ಪೊ ಆಗಿದ್ದಲ್ಲಿ ಚಿತ್ತ ನಕ್ಷತ್ರ ಮತ್ತು ಕನ್ಯಾ ರಾಶಿ ಆಗುತ್ತದೆ. ಸೂಕ್ಷ್ಮ ಗಮನಿಕೆ ಕನ್ಯಾ ರಾಶಿಯವರ ವೈಶಿಷ್ಟ್ಯ. ವಾಸ್ತವ ಏನು ಎಂದು ಗ್ರಹಿಸುವುದು ಇವರ ವೈಶಿಷ್ಟ್ಯ. ಕಾಯಕಪ್ರಜ್ಞೆ ಸ್ವಭಾವ ಸಹಜವಾಗಿ ಇರುತ್ತದೆ. ಅದರೊಂದಿಗೆ ಸಕಾಲದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇವರ ಕಡೆಗೆ ಎಲ್ಲರೂ ತಿರುಗಿ ನೋಡುತ್ತಾರೆ.

ಕನ್ಯಾ ರಾಶಿಯಲ್ಲಿ ಜನಿಸಿರುವ ಮಹಿಳೆಯರು ನೋಡಲು ಶಾಂತರಾಗಿ ಕಂಡರೂ ಸಾಮಾನ್ಯವಾಗಿ ಅವರಿಗೆ ಕೋಪ ಹೆಚ್ಚು. ಎಲ್ಲರೊಂದಿಗೆ ಸ್ನೇಹ, ಪ್ರೀತಿಯಿಂದ ನಡೆ...