Bengaluru, ಏಪ್ರಿಲ್ 23 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 22ರ ಸಂಚಿಕೆಯಲ್ಲಿ ಕುಸುಮಾ ಮತ್ತು ಭಾಗ್ಯ ಹಾಗೂ ಸುಂದರಿ ಕನ್ನಿಕಾ ಆಫೀಸ್‌ನಲ್ಲಿ ಅವಳ ಉದ್ಯೋಗಿಗಳಿಗೆ ಮನೆಯಿಂದ ತಂದ ಒಳ್ಳೆಯ ಊಟವನ್ನು ಕೊಟ್ಟಿದ್ದಾರೆ. ಅವರೆಲ್ಲರೂ ಮನಸೋ ಇಚ್ಛೆ ಖುಷಿಯಲ್ಲಿ ಊಟ ಮಾಡಿದ್ದಾರೆ. ಮತ್ತೆ ಮತ್ತೆ ಕೇಳಿ ಊಟ ಹಾಕಿಸಿಕೊಂಡಿದ್ದಾರೆ. ಅಷ್ಟರಲ್ಲಿ ಕನ್ನಿಕಾ ಅಲ್ಲಿಗೆ ಬಂದಿದ್ದಾಳೆ. ಕನ್ನಿಕಾಳನ್ನು ನೋಡಿ ಕುಸುಮಾ, ಬಾ ಬಾ ಕನ್ನಿಕಾ, ನೀನು ಬರುವುದು ತಡವಾಯಿತು ಎಂದು ಕೂಗಿ ಕರೆದಿದ್ದಾಳೆ. ಕನ್ನಿಕಾ ಕೋಪದಿಂದಲೇ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾಳೆ.

ಕನ್ನಿಕಾ ಬರುತ್ತಲೇ ಅವಳನ್ನು ನೋಡಿಯೂ ಉದ್ಯೋಗಿಗಳು ಊಟ ಮಾಡುವುದನ್ನು ಮುಂದುವರಿಸಿದ್ದಾರೆ. ಭಾಗ್ಯ ಮತ್ತು ಸುಂದರಿ ಅವರಿಗೆ ಬೇಕಾಗಿರುವುದನ್ನು ಬಡಿಸಿದ್ದಾರೆ. ಹೀಗೆ ಊಟ ಸಾಗಿದೆ. ಅಷ್ಟರಲ್ಲಿ ಕನ್ನಿಕಾ, ಯಾಕೆ ನನ್ನ ಆಫೀಸ್‌ಗೆ ಬಂದಿದ್ದೀರಿ? ಯಾರಲ್ಲಿ ಕೇಳಿ ಬಂದಿರಿ ಎಂದು ದಬಾಯಿಸಿದ್ದಾಳೆ. ಆಗ ಕುಸುಮಾ, ಕನ್ನಿಕಾಳನ್ನು ತಡೆದಿದ್ದಾಳೆ. ನೀನು ಯ...