Bengaluru, ಫೆಬ್ರವರಿ 10 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 9ರ ಸಂಚಿಕೆಯಲ್ಲಿ ಭಾಗ್ಯ, ಮಕ್ಕಳನ್ನು ತಬ್ಬಿ ಹಿಡಿದುಕೊಂಡು ಸಮಾಧಾನ ಪಡಿಸಿದ್ದಾಳೆ. ಮಕ್ಕಳು ಪರಸ್ಪರ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ, ಅಲ್ಲಿಗೆ ಭಾಗ್ಯ ಬರುತ್ತಾಳೆ. ಆಗ ತನ್ವಿ, ನಾನು ಹೊಸದಾಗಿ ಏನನ್ನೂ ಕೇಳುತ್ತಿಲ್ಲ. ಏನೂ ಖರೀದಿ ಮಾಡಿಲ್ಲ.ಕೋರ್ಸ್‌ಗೆ ದುಡ್ಡು ಮಾತ್ರ ಕೇಳಿದೆ ಅಷ್ಟೆ ಎಂದಿದ್ದಾಳೆ. ಆಗ ಗುಂಡಣ್ಣ, ನೀನು ಮನೆಯಲ್ಲಿ ಇಷ್ಟೊಂದು ಕಷ್ಟ ಇರುವಾಗ, ಹಾಗೆಲ್ಲ ಮಾಡುವುದು ತಪ್ಪು ಎಂದು ಹೇಳುತ್ತಾನೆ. ತನ್ವಿ, ನಾನು ಈಗಲೂ ಹಳೆಯ ಬಟ್ಟೆಗಳನ್ನೇ ಧರಿಸುತ್ತಿದ್ದೇನೆ. ಹೊಸ ಬಟ್ಟೆ ಬೇಡ, ನಾನು ಇನ್ನು ಮುಂದೆ ಏನನ್ನೂ ಕೇಳುವುದಿಲ್ಲ ಎಂದು ಹೇಳುತ್ತಾಳೆ.

ಇತ್ತ, ಶ್ರೇಷ್ಠಾಳನ್ನು ಕರೆದುಕೊಂಡ ತಾಂಡವ್, ಮನೆಗೆ ಬಂದಿದ್ದಾನೆ. ನಾನು ಭಾಗ್ಯಳನ್ನು ಅವರಿಂದ ದೂರ ಮಾಡಲು ಪ್ಲ್ಯಾನ್ ರೂಪಿಸಿದ್ದೆ, ತನ್ವಿಯನ್ನು ನನ್ನತ್ತ ಸೆಳೆದುಕೊಳ್ಳುವುದು ನನ್ನ ಗುರಿಯಾಗಿತ್ತು. ಆದರೆ ನೀನು ಬಂದು ಎಲ್ಲವನ...