Bengaluru, ಫೆಬ್ರವರಿ 4 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಭಾಗ್ಯಾ ಹೋಟೆಲ್‌ನಿಂದ ಹೊರನಡೆಯುವ ಪ್ರಸಂಗ ನಡೆಯಿತು. ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಭಾಗ್ಯಾ, ಹೋಟೆಲ್‌ನ ಅಡುಗೆ ಕೋಣೆಗೆ ಹೋಗುತ್ತಾಳೆ. ಅಲ್ಲಿ, ತನ್ನ ಸಹೋದ್ಯೊಗಿಗಳನ್ನು ಕೊನೆಯ ಬಾರಿಗೆ ಒಮ್ಮೆ ಮಾತನಾಡಿಸುತ್ತಾಳೆ. ಎಲ್ಲರೂ ಆ ಸಂದರ್ಭದಲ್ಲಿ ತೀರಾ ಭಾವುಕರಾಗಿ ಭಾಗ್ಯಾಗೆ ಬಿಟ್ಟು ಹೋಗಬೇಡ ಎನ್ನುತ್ತಾರೆ. ಆದರೆ, ಭಾಗ್ಯಾಳಿಗೆ ಅಲ್ಲಿಂದ ಹೊರಡದೇ ಬೇರೆ ದಾರಿ ಇರುವುದಿಲ್ಲ. ಅಲ್ಲದೆ, ಕನ್ನಿಕಾ ನೋಡುವುದಕ್ಕೂ ಮೊದಲೇ ಹೊರಟು ಬಿಡುತ್ತೇನೆ, ಇಲ್ಲವಾದರೆ, ಅದಕ್ಕೂ ಮತ್ತೆ ಕಿರಿಕಿರಿ ಮಾಡಬಹುದು ಎನ್ನುತ್ತಾಳೆ. ಎಲ್ಲರಿಗೂ ಶುಭಹಾರೈಸಿ, ಚೆನ್ನಾಗಿ ಕೆಲಸ ಮಾಡಿ, ಮುಂದೆ ಅವಕಾಶ ಇದ್ದರೆ ಮತ್ತೆ ಸಿಗೋಣ, ಯಾರೂ ಬೇಸರಿಸಿಕೊಳ್ಳಬೇಡಿ ಎಂದು ಹೇಳಿ ಹೋಗುತ್ತಾಳೆ.

ಹೋಟೆಲ್‌ನಿಂದ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕನ್ನಿಕಾ ಮತ್ತೆ ಭಾಗ್ಯಾಳನ್ನು ಕರೆಯುತ್ತಾಳೆ. ಇನ್ನೂ ಯಾಕೆ ಹೊರಟಿಲ್ಲ, ಯಾಕೆ ಇನ್ನೂ ಇ...