ಭಾರತ, ಮಾರ್ಚ್ 20 -- Kannada Television Serials: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಮತ್ತು ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ಗಳಿಗೆ ಒಂದು ನಂಟಿದೆ. ಅದು ಮಲ್ಲಿ. ಅಮೃತಧಾರೆ ಧಾರಾವಾಹಿಯಲ್ಲಿ ಅಕ್ಕೋರೆ ಅಕ್ಕೋರೆ ಎಂದು ಅಕ್ಕರೆಯಿಂದ ಕರೆಯುತ್ತಿದ್ದ ಮಲ್ಲಿ ಈಗ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನ ನಾಯಕಿ. ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಟ್ವಿಸ್ಟ್‌ ಘಟಿಸಿದೆ. ರಾಜೇಂದ್ರ ಭೂಪತಿಯ ಮಗಳೇ ಮಲ್ಲಿ ಎಂಬ ವಿಷಯ ಗೌತಮ್‌ಗೆ ಗೊತ್ತಾಗಿದೆ. ಜೈದೇವ್‌ ಭೂಪತಿಯ ಅಳಿಯನಾಗುತ್ತಿದ್ದಾನೆ. ಏಕೆಂದರೆ, ಭೂಪತಿಯ ಮಗಳೇ ಈ ಮಲ್ಲಿ.

ಮಲ್ಲಿ ಎಂದಾಗ ನೆನಪಾಗುವುದು ರಾಧಾ ಭಗವತಿ. ಅಕ್ಕೋರೆ ಅಕ್ಕೋರೆ ಎಂದು ಕರೆಯುತ್ತಿದ್ದ ಈ ಮಲ್ಲಿಯ ಪಾತ್ರಕ್ಕೆ ಜೀವ ತುಂಬಿದಾಕೆ ಈ ಭಗವತಿ. ಆದರೆ, ಇತ್ತೀಚೆಗೆ ಕಲರ್ಸ್‌ ಕನ್ನಡದಲ್ಲಿ ಹೊಸ ಸೀರಿಯಲ್‌ ಆರಂಭವಾಗಿತ್ತು. ಆ ಸೀರಿಯಲ್‌ ಹೆಸರು ಭಾರ್ಗವಿ ಎಲ್‌ಎಲ್‌ಬಿ.

ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನ ನಾಯಕಿಯಾಗಿ ಮಲ್ಲಿ ಅಂದ್ರೆ ರಾಧಾ ಭಗವತಿ ಆಯ್ಕೆಯಾಗಿದ್ದರು. ಈಗ ಭಾರ್ಗವಿ ಎಲ್‌ಎ...