ಭಾರತ, ಏಪ್ರಿಲ್ 4 -- ಕನ್ನಡ ನಟ ಧರ್ಮ ಕೀರ್ತಿರಾಜ್‌ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಕನ್ನಡ ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಸ್ಪರ್ಧಿಸಿದ್ದ ಧರ್ಮನಿಗೆ ಈಗ ತೆಲುಗಿನಲ್ಲಿ ಅವಕಾಶ ದೊರಕಿದೆ. ಬ್ಲಡ್‌ ರೋಸಸ್‌ ಎಂಬ ತೆಲುಗು ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ. ತೆಲುಗು ಸಿನಿಮಾರಂಗದ ಬೋಲ್ಡ್‌ ನಟಿ ಅಪ್ಸರಾ ರಾಣಿ ಜತೆ ಇವರು ನಟಿಸುತ್ತಿದ್ದಾರೆ. ಈಗಾಗಲೇ ಕ್ಯಾಡ್ಬರಿಸ್‌, ಟೆನೆಂಟ್‌, ರೋನಿ, ಓ ಮನಸೇ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈಗ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ.

ಬ್ಲಡ್‌ ರೋಸಸ್‌ ಸಿನಿಮಾದ ಫಸ್ಟ್‌ ಲುಕ್‌ ಅನಾವರಣವಾಗಿದೆ. ಈ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್‌ ಅವರು ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಪ್ಸರಾ ರಾಣಿ ನಾಯಕಿ. ಇನ್‌ಸ್ಟಾಗ್ರಾಂನಲ್ಲಿ ಕೀರ್ತಿ ಧರ್ಮರಾಜ್‌ ಬ್ಲಡ್‌ ರೋಸಸ್‌ ಸಿನಿಮಾದಲ್ಲಿ ತಾನು ನಟಿಸುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಪ್ಸರಾ ರಾಣಿ ಜತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಈ ಸಿನಿಮಾ ಕೇವಲ ತೆಲುಗು ಭಾಷ...