ಭಾರತ, ಏಪ್ರಿಲ್ 27 -- ಒಂದು ಕಾಲದಲ್ಲಿ ಇವರೆಲ್ಲ ಕನ್ನಡ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ರಂಗವನ್ನು ಆಳಿದವರು. ಹಲವು ಸಿನಿಮಾಗಳಲ್ಲಿ ನಾಯಕ-ನಾಯಕಿಯಾಗಿಯೂ ನಟಿಸಿದ್ದವರು. ಸಿನಿಮಾಗಳಲ್ಲಿ ತಮ್ಮ ನಟನೆಯ ಛಾಪು ಮೂಡಿಸಿದ್ದ ಇವರು ಧಾರಾವಾಹಿ ಕ್ಷೇತ್ರಕ್ಕೂ ಕಾಲಿಸಿರಿ ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಿದ್ದಾರೆ. ಕನ್ನಡದ ವಿವಿಧ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಸಿನಿಮಾ ಸ್ಟಾರ್‌ಗಳು ನಟಿಸುತ್ತಿದ್ದಾರೆ. ಸದ್ಯ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಪ್ರಸಿದ್ಧ ಸಿನಿಮಾ ನಟ-ನಟಿಯರು ಯಾರೆಲ್ಲಾ ನೋಡಿ.

ಒಂದು ಕಾಲದಲ್ಲಿ ತನ್ನ ಮನೋಜ್ಞ ನಟನೆಯ ಮೂಲಕ ಕನ್ನಡ ಚಿತ್ರರಂಗವನ್ನು ಆಳಿದ್ದ ನಟಿ ಉಮಾಶ್ರೀ. ಹಾಸ್ಯ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು, ತಾಯಿ ಪಾತ್ರದ ಮೂಲಕ ಎಮೋಷನಲ್ ಆ್ಯಕ್ಟಿಂಗ್‌ಗೂ ಸೈ ಎನ್ನಿಸಿಕೊಂಡವರು. ಉಮಾಶ್ರೀ ಸದ್ಯ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದಿದ್ದಾರೆ.

ಎರಡೂವರೆ ವರ್ಷದಲ್ಲಿದ್ದಾಗಲೇ ಜಾಹೀರಾತೊಂದರ ಮೂಲಕ ನಟನೆ ಆರಂಭಿಸಿದ್ದ ಸ...