ಭಾರತ, ಮೇ 5 -- ಜನಪ್ರಿಯ ಗಾಯಕ ಸೋನು ನಿಗಮ್‌ ವಿರುದ್ಧ ಕರ್ನಾಟ ಫಿಲ್ಮ್‌ ಚೇಂಬರ್‌ನಲ್ಲಿ ನಡೆದ ಸ್ಯಾಂಡಲ್‌ವುಡ್‌ನ ಪ್ರಮುಖ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.‌ ಕನ್ನಡ ಚಿತ್ರರಂಗದಿಂದ ಸೋನು ನಿಗಮ್‌ ಬ್ಯಾನ್‌ ಮಾಡುವ ಕುರಿತೂ ಚರ್ಚಿಸಲಾಗಿದೆ. ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿರುವ ಗಾಯಕ ಕ್ಷಮಾಪಣೆ ಕೇಳಬೇಕು. ಕ್ಷಮಾಪಣೆ ಕೇಳುವ ತನಕ ಕನ್ನಡ ಚಿತ್ರರಂಗದಿಂದ ದೂರವಿಡಲು ನಿರ್ಧರಿಸಲಾಗಿದೆ. ಒಟ್ಟಾರೆ ಸೋನು ನಿಗಮ್‌ ವಿರುದ್ದ ಅಸಹಕಾರ ಚಳವಳಿಗೆ ಕನ್ನಡ ಚಿತ್ರರಂಗ ನಿರ್ಧರಿಸಿದೆ.

ಇಂದು ಮಧ್ಯಾಹ್ನ 1 ಗಂಟೆ ಆಸುಪಾಸಿನಲ್ಲಿ ಬೆಂಗಳೂರಿನ ಫಿಲ್ಮ್‌ ಚೇಂಬರ್‌ನಲ್ಲಿ ಪ್ರಮುಖ ಗಾಯಕರನ್ನು ಒಳಗೊಂಡ ಪ್ರಮುಖರ ಸಭೆ ನಡೆದಿದೆ. ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ "ಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಿಂದ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ" ಎಂಬ ಮಾಹಿತಿಯನ್ನು ಫಿಲ್ಮ್‌ಚೇಂಬರ್‌ ನೀಡಿದೆ.

"ಗಾಯಕ ಸೋನು ನಿಗಮ್‌ ಅವರು ಕನ್ನಡ ಮತ್ತು ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಕ್ಷಮೆ ...