Bengaluru, ಫೆಬ್ರವರಿ 6 -- Kannada Film industry: ಕಳೆದ ವರ್ಷ ಸಾಕಷ್ಟು ಸೋಲು ಮತ್ತು ನಷ್ಟವನ್ನು ಕಂಡಿದ್ದ ಕನ್ನಡ ಚಿತ್ರರಂಗ, ವರ್ಷಾಂತ್ಯಕ್ಕೆ ಒಂದಿಷ್ಟು ಚಿತ್ರಗಳಿಗೆ ಪ್ರೇಕ್ಷಕರು ಬಂದ ಕಾರಣ, ಸ್ವಲ್ಪ ಆಶಾಭಾವನೆ ಮೂಡಿತ್ತು. ಹೊಸ ವರ್ಷದಲ್ಲಿ ಇನ್ನೊಂದಿಷ್ಟು ಗೆಲುವು ನೋಡಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಜನವರಿ ತಿಂಗಳಲ್ಲಿ ಒಟ್ಟು 22 ಕನ್ನಡ ಚಿತ್ರಗಳು ಬಿಡಗುಡೆಯಾಗಿದ್ದು, ಬಹುತೇಕ ಚಿತ್ರಗಳು ಹೆಚ್ಚು ಸದ್ದು ಮಾಡದೆ ಮರೆಯಾಗಿವೆ.

ಜನವರಿ ತಿಂಗಳಲ್ಲಿ 22 ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಈ ಪೈಕಿ ಗೆದ್ದಿದ್ದು ಯಾವುದು? ನಿರ್ಮಾಪಕರಿಗೆ ದುಡ್ಡು ತಂದು ಕೊಟ್ಟ ಚಿತ್ರ ಯಾವುದು? ಎಂದು ಹುಡುಕಿದರೆ, ಉತ್ತರ ಸಿಗುವುದಿಲ್ಲ. ವರ್ಷದ ಮೊದಲ ಶುಕ್ರವಾರ (ಜನವರಿ 03) 'ಗನ್ಸ್ ಆ್ಯಂಡ್‍ ರೋಸಸ್', 'ಸ್ವೇಚ್ಛಾ' ಮತ್ತು 'ಆಫ್ಟರ್ ಬ್ರೇಕಪ್‍' ಎಂಬ ಚಿತ್ರಗಳು ಬಿಡುಗಡೆಯಾದವು. ಮೂರಕ್ಕೆ ಮೂರೂ ಹೊಸಬರ ಚಿತ್ರಗಳಾಗಿದ್ದವು. ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾದ ಈ ಚಿತ್ರಗಳು, ಕೆಲವೇ ದಿನಗಳಲ್ಲಿ ಮರೆಯಾದವು.

ಇದನ್ನೂ...