ಭಾರತ, ಏಪ್ರಿಲ್ 28 -- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿ 'ಕರಿಮಣಿ'ಯ ಬ್ಲ್ಯಾಕ್‌ ರೋಸ್‌ ಕನ್ನಡ ಕಿರುತೆರೆ ಪ್ರೇಕ್ಷಕ ಬಳಗದಲ್ಲಿ ಸಖತ್ ಫೇಮಸ್‌. ಒಂದಿಷ್ಟು ತಿಂಗಳುಗಳ ಕಾಲ ಮರೆಯಲ್ಲಿದ್ದ ಬ್ಲ್ಯಾಕ್ ರೋಸ್ ಯಾರು ಅನ್ನೋದು ರಿವೀಲ್ ಆಗಿ ಕೆಲವು ದಿನಗಳು ಕಳೆದಿವೆ. ಕರಿಮಣಿ ಧಾರಾವಾಹಿಯ ಕರ್ಣನ ಮಲತಾಯಿ ಅರುಂಧತಿಯೇ ಬ್ಲ್ಯಾಕ್‌ ರೋಸ್‌. ಬ್ಲ್ಯಾಕ್‌ ರೋಸ್‌ ಎಂಬ ಖಳನಾಯಕಿ, ಅರುಂಧತಿ ಎಂಬ ಮುಗ್ಧ ತಾಯಿ ಈ ಎರಡೂ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿಯ ನಿಜವಾದ ಹೆಸರೇನು ಅವರ ಹಿನ್ನೆಲೆ ಏನು ಎಂಬ ಕುತೂಹಲ ನಿಮಗೂ ಇರಬಹುದು. ಅವರ ಕುರಿತ ವಿವರ ಇಲ್ಲಿದೆ.

ನೃತ್ಯಕ್ಕೆ ಆಡಿಷನ್ ಕೊಡಲು ಹೋದ ಇವರು ಧಾರಾವಾಹಿಗೆ ಆಯ್ಕೆಯಾಗುತ್ತಾರೆ. ಸುವರ್ಣ ವಾಹಿನಿಯ ದುರ್ಗಾ ಧಾರಾವಾಹಿಯಲ್ಲಿ ಇವರು ಮೊದಲ ಬಾರಿಗೆ ನಟಿಸುತ್ತಾರೆ. ನಂತರ ಕಲರ್ಸ್ ಕನ್ನಡದ ಅಗ್ನಿಸಾಕ್ಷಿಯ ರಾಧಿಕಾ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಡುತ್ತದೆ. ಸುಬ್ಬಲಕ್ಷ್ಮೀ ಸಂಸಾರ, ದೊಡ್ಮನೆ ಸೊಸೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ ಅನುಷಾರಾವ್‌...