ಭಾರತ, ಮೇ 15 -- Shrimad Ramayan Serial: ಕೋವಿಡ್‌ ಬಳಿಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಿರುತೆರೆ ಕ್ಷೇತ್ರ ಸ್ಥಗಿತಗೊಂಡಾಗ, ಹಳೇ ಸೀರಿಯಲ್‌ಗಳಿಗೆ ಬಂಗಾರದ ಬೆಲೆ ಬಂದಿತ್ತು. ಕೆಲವು ಸೀರಿಯಲ್‌ಗಳು ಪುನಃ ಪ್ರಸಾರ ಕಂಡರೆ, ಪೌರಾಣಿಕ ಧಾರಾವಾಹಿಗಳು ಬೇರೆ ಬೇರೆ ಭಾಷೆಗಳಿಗೆ ಡಬ್‌ ಆಗಿ ಟೆಲಿಕಾಸ್ಟ್‌ ಆಗಿ ಮೆಚ್ಚುಗೆ ಪಡೆದುಕೊಂಡವು. ಅದಾದ ಮೇಲೆ ಡಬ್ಬಿಂಗ್‌ ಸೀರಿಯಲ್‌ಗಳು ಕನ್ನಡದಲ್ಲೂ ಸರ್ವೇ ಸಾಮಾನ್ಯ ಎನಿಸತೊಡಗಿದವು. ಇಂದಿಗೂ ಕನ್ನಡದ ಹಲವು ವಾಹಿನಿಗಳಲ್ಲಿ ಬೇರೆ ಬೇರೆ ಭಾಷೆಯ ಸೀರಿಯಲ್‌ಗಳು ಡಬ್‌ ಆಗಿ ಪ್ರಸಾರ ಕಾಣುತ್ತಿವೆ. ಈಗ ಆ ಸಾಲಿಗೆ ಉದಯ ಟಿವಿಯಲ್ಲಿ ಹೊಸ ಸೀರಿಯಲ್‌ ಸೇರ್ಪಡೆಯಾಗುತ್ತಿದೆ. ಅದುವೇ ಶ್ರೀಮದ್‌ ರಾಮಾಯಣ!

ಹೌದು, ಕನ್ನಡದ ಮನರಂಜನಾ ವಾಹಿನಿ ಉದಯ ಟಿವಿ ಇದೀಗ ಶ್ರೀಮದ್ ರಾಮಾಯಣ ಧಾರಾವಾಹಿಯನ್ನು ವೀಕ್ಷಕರ ಮುಂದೆ ತರುತ್ತಿದ್ದು, ಅದ್ಭುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ಮುಂದಾಗಿದೆ. ಮೇ 20 ರಿಂದ ಸಂಜೆ 6 ಗಂಟೆಗೆ ಶ್ರೀಮದ್‌ ರಾಮಾಯಣ ಸೀರಿಯಲ್ ಪ್ರಸಾರವಾಗಲಿದೆ. ರ...