Bengaluru, ಏಪ್ರಿಲ್ 30 -- ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸಿರೀಸ್‌ಗಳನ್ನು ನೋಡಿದಾಗಲೆಲ್ಲ, ಕನ್ನಡ ಸಿನಿ ಉದ್ಯಮದ ಬಗ್ಗೆ ಬೇಸರವಾಗುತ್ತಿತ್ತು. ಅದರೆ ಜೀ5ನಲ್ಲಿ ʻಅಯ್ಯನ ಮನೆʼ ಬರುತ್ತಿದೆ ಎನ್ನುವ ಟ್ರೇಲರ್‌ ನೋಡಿದಾಗ ಖುಷಿಯಾಯಿತು. ಅಷ್ಟಕ್ಕೂ ಕನ್ನಡಕ್ಕೆ ಇದೇನು ಮೊದಲ ಸಿರೀಸ್‌ ಆಗಿರಲಿಲ್ಲ. ಈ ಹಿಂದೆ ವೂಟ್‌ನಲ್ಲಿ ಎರಡು ಸಿರೀಸ್‌ಗಳು ಬಂದಿದ್ದವು. ಅದಾದ ಬಳಿಕ ತಮ್ಮದೇ ಆದ ವೆಬ್‌ಸೈಟ್‌ನಲ್ಲಿ ಒಂದು ಸಿರೀಸ್‌ನ್ನು ರಕ್ಷಿತ್‌ ಶೆಟ್ಟಿ ತಂಡ ಬಿಡುಗಡೆ ಮಾಡಿತ್ತು.

ಆದರೆ ʻಅಯ್ಯನ ಮನೆʼಯನ್ನು ಕನ್ನಡದಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾದ ಮೊದಲ ಸಿರೀಸ್‌ ಎಂದು ಹೇಳಬಹುದು. ಶೃತಿ ನಾಯ್ಡು ನಿರ್ಮಾಣದಲ್ಲಿ ರಮೇಶ್‌ ಇಂದಿರಾ ನಿರ್ದೇಶಿಸಿರುವ ʻಅಯ್ಯನ ಮನೆʼ ಸಿರೀಸ್‌ನಲ್ಲಿ ದಕ್ಷಿಣ ಕನ್ನಡದ ದೈವದ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಮೊದಲ ಎಪಿಸೋಡ್‌ನಿಂದ ಕೊನೆಯವರೆಗೂ ದೈವದ ಮೇಲೆ ಕಥೆ ಹೋಗುತ್ತದೆ ಎಂದೆನಿಸಿದರೂ, ಅಂತಿಮವಾಗಿ ಚಿತ್ರಣವೇ ಬದಲಾಗುತ್ತದೆ. ಈ ಮೂಲಕ ಒಟಿಟಿ ಸಿರೀಸ್‌ನಲ್ಲಿ ಇರಬೇಕಾದ ಮಾರ್ಕೆಟಿಂ...