Kunigaĺ, ಏಪ್ರಿಲ್ 26 -- ತುಮಕೂರು: ವರನಟ ಡಾ.ರಾಜ್ಕುಮಾರ್ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಶನಿವಾರ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಉಚಿತ ತಿನಿಸು ಮೇಳದಲ್ಲಿ ನಾಗರಿಕರು ಪಾಲ್ಗೊಂಡು ಸಂಭ್ರಮಿಸಿದರು. ಮೇಳಕ್ಕೆ ಆಗಮಿಸಿದ ಮಕ್ಕಳು, ಪೋಷಕರಿಗೆ ಅನಾನಸ್, ನಿಂಬೆ, ಶುಂಠಿ, ಪುದಿನ ಮಿಶ್ರಿತ ಕಬ್ಬಿನಹಾಲು ನೀಡಿ ಸ್ವಾಗತಿಸಿದ್ದು, ನಂತರ ಬೇಯಿಸಿದ ಕಡಲೆಕಾಯಿ, ಸಿಹಿಗೆಣಸು, ಕಲ್ಲಂಗಡಿ, ಸೌತೆಕಾಯಿ ವಿತರಿಸಿದ್ದು ಬಿಸಿಲ ಧಗೆಯನ್ನು ಲೆಕ್ಕಿಸದೆ ನೂರಾರು ಪುಟಾಣಿಗಳು, ಗ್ರಾಮೀಣ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.
ಮೊದಲಿಗೆ ಟೈರ್ ಓಟದ ಸ್ಪರ್ಧೆ, ಕಿರಿಯರಿಗೆ ನಾಲ್ಕು ಸುತ್ತು ಹಿರಿಯರಿಗೆ ಎರಡು ಸುತ್ತು, ಮಹಿಳೆಯರಿಗೆ ಸ್ಪೂನ್ ಮತ್ತು ನಿಂಬೆ ಓಟ ಆಯೋಜಿಸಿದ್ದ ಮೂರು ಸುತ್ತುಗಳಲ್ಲೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು, ಗೋಣಿ ಚೀಲ ಧರಿಸಿ ಓಟದ ಸ್ಫರ್ಧೆಯಲ್ಲಿ ಇಪ್ಪತ್ತಕ್ಕು ಹೆಚ್ಚು ಪುಟಾಣಿಗಳು ಪಾಲ್ಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.