Bangalore, ಮೇ 16 -- ಈ ಎಐ ನಿರ್ಮಿತ ಸಿನಿಮಾದ ಹೆಸರು 'ಲವ್ ಯೂ'. ಈ ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಎಸ್‍. ನರಸಿಂಹಮೂರ್ತಿ. ಇನ್ನು, ಈ ಚಿತ್ರವನ್ನು ಎಐ ಮೂಲಕ ಸೃಷ್ಟಿಸಿರುವುದು ನೂತನ್‍. ಬುಕ್‌ ಮೈ ಶೋನಲ್ಲಿ ಈಗಾಗಲೇ ಈ ಸಿನಿಮಾಕ್ಕೆ ವಿವಿಧ ಥಿಯೇಟರ್‌ಗಳಲ್ಲಿ ಶೋ ದೊರಕಿರುವುದನ್ನು ನೋಡಬಹುದು. ಉದಾಹರಣೆಗೆ ಬೆಂಗಳೂರಿನ ಸಿನಿಪೋಲಿಸ್‌, ಗೋಪಾಲನ್‌ ಮಿನಿಪ್ಲೆಕ್ಸ್‌, ಗೋಪಾಲನ್‌ ಮಾಲ್‌ ಸಿರಸಿ ಸರ್ಕಲ್‌ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರವನ್ನು ಒಂದು ರೂಮಿನಲ್ಲಿ, ಒಂದು ಕಂಪ್ಯೂಟರ್‌ ಇಟ್ಟುಕೊಂಡು, 20-30 ಎಐ ಸಾಫ್ಟ್‌ವೇರ್‌ಗಳನ್ನು ಬಳಸಿ ಸೃಷ್ಟಿಸಲಾಗಿದೆಯಂತೆ. ಕ್ಯಾಮೆರಾ ಬಳಸದೆಯೇ ಚಿತ್ರೀಕರಣವಾದ ಚಿತ್ರವಿದು.

'ಕಥೆ, ಸಾಹಿತ್ಯ, ಸಂಭಾಷಣೆ ಹೊರತುಪಡಿಸಿದರೆ, ಮಿಕ್ಕೆಲ್ಲವನ್ನೂ ಎಐ ತಂತ್ರಜ್ಞಾನದ ಮೂಲಕವೇ ಮಾಡಿರುವುದು ಈ ಚಿತ್ರದ ವಿಶೇಷತೆ. ಚಿತ್ರದಲ್ಲೀ ಬರುವ ಪ್ರತಿ ಪಾತ್ರಗಳು, ಅವುಗಳ ಸಂಭಾಷಣೆ, ಸಂಗೀತ ಸಂಯೋಜನೆ, ಛಾಯಾಗ್ರಹಣ, ಸೌಂಡ್ ಡಿ...