ಭಾರತ, ಮಾರ್ಚ್ 16 -- ಸಿದ್ಧಾರ್ಥ್, ನಯನತಾರಾ ಮತ್ತು ಮಾಧವನ್ ಈ ಮೂವರು ತಾರೆಯರು ಒಟ್ಟಾಗಿ ಅಭಿನಯಿಸಿರುವ ಸಿನಿಮಾ 'ಟೆಸ್ಟ್‌' ಒಟಿಟಿಗೆ ಬರಲು ಸಿದ್ಧವಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವ ಮುನ್ನವೇ ಈ ಸಿನಿಮಾ ಒಟಿಟಿಗೆ ಪಾದಾಪ್ರಣೆ ಮಾಡಲಿದೆ. ಸ್ಟಾರ್ ನಟರೆಲ್ಲ ಒಟ್ಟಾಗಿ ಈ ಸಿನಿಮಾದಲ್ಲಿ ಅಭಿನಯಿಸಿರುವ ಕಾರಣ ಸಾಕಷ್ಟು ಜನರಿಗೆ ಈ ಸಿನಿಮಾವನ್ನು ನೋಡಲೇಬೇಕು ಎಂಬ ಮನಸಾಗಿದೆ. ಈ ಸಿನಿಮಾದಲ್ಲಿ ಕ್ರೀಡೆಗೆ ಸಂಬಂಧಿಸಿದ ಕಥನವಿದೆ. ಈ ಚಿತ್ರವು ಕ್ರಿಕೆಟ್ ಹಿನ್ನೆಲೆಯನ್ನು ಹೊಂದಿರುತ್ತದೆ. ಟೆಸ್ಟ್ ಚಿತ್ರದಲ್ಲಿ ಮಾಧವನ್ ಅವರ ಪಾತ್ರವನ್ನು ಟೀಸರ್ ಮೂಲಕ ಬಹಿರಂಗಪಡಿಸಿದ್ದಾರೆ.

ಟೆಸ್ಟ್ ಚಿತ್ರದಲ್ಲಿ, ಮಾಧವನ್ ವಿಜ್ಞಾನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೊಸ ಟೀಸರ್ ಮೂಲಕ ತಿಳಿಯುತ್ತದೆ. ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರವನ್ನು ಮಾಡಬೇಕು ಎಂಬುದು ಅವನ ಗುರಿ ಆಗಿರುತ್ತದೆ. ಆದರೆ ಸಾಧನೆ ಮಾಡುವ ಮುನ್ನ ಹಲವು ತೊಡಕುಗಳು ಎದುರಾಗುತ್ತದೆ. ಆವಿಷ್ಕಾರಕ್ಕೆ ಅನುಮತಿ ಪಡೆಯಲು ರಾಜಕಾರಣಿಗಳ ಸುತ್ತ ಸುತ್ತಿ ಸಾಕಾ...