ಭಾರತ, ಫೆಬ್ರವರಿ 9 -- ತೆಲುಗು ಬಿಗ್ ಬಾಸ್ ರನ್ನರ್ ಅಪ್ ಅಮರ್ ದೀಪ್ ಚೌಧರಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಜಾನಕಿ ಕಲಗನಲೇದು' ತೆಲುಗು ಧಾರಾವಾಹಿ ಕನ್ನಡಕ್ಕೆ ಡಬ್ ಆಗುತ್ತಿದೆ. ಕನ್ನಡ ಧಾರಾವಾಹಿಗೆ ಹೆಸರು ಕೂಡಾ ಅಂತಿಮವಾಗಿದೆ. 'ಜಾನಕಿ ರಮಣ' ಎಂಬ ಟೈಟಲ್‌ನಲ್ಲಿ ಈ ಧಾರಾವಾಹಿ ಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಧಾರಾವಾಹಿಯ ಲಾಂಚಿಂಗ್‌ ದಿನ ಹಾಗೂ ಪ್ರಸಾರ ಆರಂಭ ದಿನಾಂಕ ಇನ್ನಷ್ಟೇ ಘೋಷಿಸಬೇಕಿದೆ. ಪ್ರಸಾರದ ಸಮಯವನ್ನು ಕೂಡಾ ಶೀಘ್ರದಲ್ಲೇ ಬಹಿರಂಗಪಡಿಸುವ ಸಾಧ್ಯತೆ ಇದೆ.

ಬಿಗ್ ಬಾಸ್ ತೆಲುಗು ಸೀಸನ್ 7ರ ರನ್ನರ್ ಅಪ್ ಆಗಿರುವ ಅಮರ್ ದೀಪ್ ಚೌಧರಿ ಮತ್ತು ಪ್ರಿಯಾಂಕಾ ಜೈನ್ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ನಾಯಕಿ ರಾಶಿ ಜೊತೆಗೆ ಅನಿಲ್ ಅಲ್ಲಂ ಮತ್ತು ವಿಷ್ಣುಪ್ರಿಯಾ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರಿಯಾನಾ ಗ್ಲೋರಿ, ರಾಜಾ ರವೀಂದ್ರ, ಪ್ರಿಯಾಂಕಾ ಸಿಂಗ್ ಸೇರಿದಂತೆ ಟಾಲಿವುಡ್ ನಟರು ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಧಾರಾವಾಹಿಯಲ್ಲಿ ಅ...