ಭಾರತ, ಏಪ್ರಿಲ್ 26 -- ಗಿಚ್ಚಿ ಗಿಲಿ ಗಿಲಿ ರಾಘವೇಂದ್ರ ಅವರದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮ. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ಇವರು, ಎಲ್ಲರಿಗೂ ಹೆಣ್ಣುಮಗಳ ಅವತಾರದಲ್ಲಿಯೇ ಕಂಡಿದ್ದೇ ಹೆಚ್ಚು. ಸದ್ಯ ಮಜಾ ಟಾಕೀಸ್‌ನಲ್ಲಿಯೂ ಹೆಣ್ಣು ವೇಷದಿಂದಲೇ ಮೋಡಿ ಮಾಡುತ್ತಿದ್ದಾರೆ. ಹೀಗಿರುವಾಗಲೇ 2023ರಲ್ಲಿಯೇ ತಮ್ಮ ಕನಸಿನ ಮನೆಯನ್ನು ಕಟ್ಟಿದ್ದಾರೆ ರಾಘವೇಂದ್ರ. ಅಂದಿನ ಮನೆಯ ಗೃಹಪ್ರವೇಶ ಹೇಗಿತ್ತು ಎಂಬುದರ ವಿಡಿಯೋವನ್ನು ಇದೀಗ ಶೇರ್‌ ಮಾಡಿದ್ದಾರವರು.

ಆ ಪಾತ್ರಗಳೇ ಅವರಿಗೆ ಇನ್ನೊಂದು ಹೊಸ ಇಮೇಜ್‌ ತಂದುಕೊಟ್ಟಿದ್ದು. ಕಲರ್ಸ್‌ ಕನ್ನಡದ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮುನ್ನೆಲೆಗೆ ಬಂದ ರಾಗಿಣಿ ಅಲಿಯಾಸ್ ರಾಘವೇಂದ್ರ‌, ತಮ್ಮ ಕಾಮಿಡಿ ಟೈಮಿಂಗ್ಸ್‌ನಿಂದಲೇ ಎಲ್ಲರ ಜನಮನ ಗೆದ್ದರು.

ಹೀಗಿರುವಾಗಲೇ ಬೆಂಗಳೂರಿನ ಚಿಕ್ಕ ಕೋಣೆಯಲ್ಲಿ ಬಾಡಿಗೆಗೆ ಇದ್ದುಕೊಂಡೇ, ದೊಡ್ಡ ಕನಸೊಂದನ್ನು ಕಂಡಿದ್ದರು. ಆ ಕನಸೀಗ ನನಸಾಗಿದೆ.

ಅಂದರೆ, ಮಧ್ಯಮ ವರ್ಗದ ಕುಟುಂಬ...