ಭಾರತ, ಮೇ 11 -- ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್‌ನ ಅಧಿಕಾರಿಗಳು ಭಾನುವಾರ (ಮೇ 11) ಸಂಜೆ ಸುದೀರ್ಘ ಸುದ್ದಿಗೋಷ್ಠಿಯಲ್ಲಿ ಇದುವರೆಗಿನ ವಿದ್ಯಮಾನಗಳ ವಿವರ ನೀಡಿದರು. ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆ ಮತ್ತು ಭಾರತೀಯ ಸೇನೆ ಅದನ್ನು ತಡೆದು ಪ್ರತಿದಾಳಿ ನಡೆಸಿದ್ದರ ವಿವರವನ್ನು ಅದಿಕಾರಿಗಳು ನೀಡಿದರು. ಪಾಕಿಸ್ತಾನದ ಅತಿರೇಕದ ನಡೆಯ ಕಾರಣ, ಆ ದೇಶಕ್ಕೆ ಹೆಚ್ಚಿನ ಹಾನಿಯಾಗಿದೆ ಎಂಬುದನ್ನು ಅವರು ವಿವರಿಸಿದರು.

ಹೆಚ್ಚು ದಾಳಿ ನಡೆಸುತ್ತಿದ್ದ ಪ್ರದೇಶವನ್ನು ಗುರುತಿಸಿ ಭಾರತೀಯ ಸೇನೆ, ದಾಳಿ ತಡೆಯುವ ಪ್ರತಿದಾಳಿ ನಡೆಸಿದೆ. ಇದರಿಂದಾಗಿ ಪಾಕಿಸ್ತಾನದ ಪಶ್ಚಿಮ ಭಾಗದ ವಾಯ ನೆಲೆಗಳನ್ನು ನಾಶಪಡಿಸಲಾಗಿದೆ ಎಂದು ಏರ್ ಮಾರ್ಷಲ್ ಎಕೆ ಭಾರತಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್‌ನ ಅಧಿಕಾರಿಗಳು ಜಂಟಿ...