Beijing, ಮೇ 11 -- ಬೀಜಿಂಗ್‌: ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಮೂರು ವಾರಗಳಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿ, ನಾಲ್ಕೈದು ದಿನಗಳಿಂದ ನಡೆದಿರುವ ದಾಳಿ ಪ್ರತಿ ದಾಳಿ ನಡುವೆಯೇ ಕದನ ವಿರಾಮ ಘೋಷಣೆಯಾದ ನಂತರ ಮತ್ತೆ ದಾಳಿಗಳು ವರದಿಯಾಗಿದ್ದು, ಇದರ ನಡುವೆಯೇ ಚೀನಾ ತನ್ನ ನಿಲುವನ್ನು ಪ್ರಕಟಿಸಿದೆ. ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ತಮ್ಮ ದೇಶವು ಪಾಕಿಸ್ತಾನದೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶನಿವಾರ ಹೇಳಿದ್ದಾರೆ.ಈ ಮೂಲಕ ಈಗಾಗಲೇ ಪಾಕಿಸ್ತಾನಕ್ಕೆ ಆರ್ಥಿಕ, ಶಸ್ತ್ರಾಸ್ತ್ರಗಳ ಬೆಂಬಲ ನೀಡುತ್ತಿದ್ದ ಚೀನಾ ತನ್ನ ನಿಲುವನ್ನು ಮೊದಲ ಬಾರಿಗೆ ಪ್ರಕಟಿಸಿದೆ.

Published by HT Digital Content Services with permission from HT Kannada....