ಭಾರತ, ಮೇ 11 -- ಭಾರತ ಮತ್ತು ಪಾಕಿಸ್ತಾನದ ನಡುವೆ ನಿನ್ನೆಯವರೆಗೆ ಯುದ್ಧ ಪರಿಸ್ಥಿತಿ ಇತ್ತು. ಆದರೆ ನಿನ್ನೆ (ಮೇ 10) ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಹಾಗೂ ಪಾಕ್‌ ಕದನ ವಿರಾಮ ಘೋಷಿಸಿವೆ. ಆದರೆ ಯುದ್ಧದ ಉದ್ಮಾನ ಎರಡೂ ದೇಶಗಳ ಜನರಲ್ಲಿ ಹಾಗೇ ಇದೆ. ಅಂತಹ ಸಂದರ್ಭದಲ್ಲಿ ದೇಶದ ಪ್ರಭುದ್ಧ ನಾಯಕರು ಯುದ್ಧೋನ್ಮಾದವನ್ನು ಶಮನಗೊಳಿಸುವ ಪ್ರಯತ್ನ ಮಾಡಬೇಕು, ಈ ಹೊತ್ತಿನಲ್ಲಿ ಅದು ಎಷ್ಟರ ಮಟ್ಟಿಗೆ ಅವಶ್ಯ ಎಂಬುದನ್ನು ತಮ್ಮ ಫೇಸ್‌ಬುಕ್‌ ಬರಹದಲ್ಲಿ ಬರೆದುಕೊಂಡಿದ್ದಾರೆ ಆಪ್ತಸಮಾಲೋಚಕ ವಸಂತ ನಡಹಳ್ಳಿ. ಅವರ ಬರಹವನ್ನು ನೀವೂ ಓದಿ.

ಇದು ಕೂಡ ಸಂಪೂರ್ಣವಾಗಿ ವೈಜ್ಞಾನಿಕ ಬರಹ. ಸ್ವಲ್ಪ ಲಘುದಾಟಿಯಲ್ಲಿ ಹೇಳಿದ್ದೇನೆ ಎನ್ನಿಸಿ ಕೆರಳುವವರು ಸ್ವಲ್ಪ ದೂರವಿದ್ದರೆ ಉತ್ತಮ.

ನನಗೆ ಬೀದಿ ಜಗಳಗಳನ್ನು ನೋಡುವುದು ಬಹಳ ಇಷ್ಟವಾದ ಕೆಲಸ. ಹಾಗಂತ ನಾನು ಜಗಳಗಳನ್ನು ಹಚ್ಚಿಹಾಕಿ ಆನಂದಿಸುವುದಿಲ್ಲ! ಈ ಬೀದಿಜಗಳದಲ್ಲಿ ತೀವ್ರವಾಗಿ ಕೆರಳಿದ ಎರಡು ವ್ಯಕ್ತಿಗಳ ನಡುವಿನ ವ್ಯಕ್ತ ಮತ್ತು ಅವ್ಯಕ್ತ ಸಂಭಾಷಣೆ ಮತ್ತು ವರ್ತನೆ ಮನುಷ್ಯ ಸ್ವಭಾವದ ಕು...