ಭಾರತ, ಜೂನ್ 16 -- ಕೆಲವರ ಕತ್ತು ದುಂಡಾಗಿರುತ್ತದೆ. ಇವರ ಗುಣ ಮತ್ತು ನಡವಳಿಕೆಗಳಲ್ಲಿ ಅನೇಕ ವೈಶಿಷ್ಟಗಳಿರುತ್ತವೆ. ಇವರು ಸಮಯ ಸಂದರ್ಭಕ್ಕೆ ಹೊಂದಿಕೊಂಡು ಬುದ್ದಿವಂತಿಕೆಯಿಂದ ಕೆಲಸ ಸಾಧಿಸುತ್ತಾರೆ. ಜಗಳ ಕದನದಿಂದ ಸದಾ ದೂರ ಉಳಿಯುತ್ತಾರೆ. ವಾದ ವಿವಾದಗಳು ಎಂದಿಗೂ ಇಷ್ಟವಾಗದು. ಆದ್ದರಿಂದ ಶಾಂತಿ ಸಂಯಮದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಎದುರಾಗಳಿಗಳ ಮನಸ್ಸನ್ನು ಪರಿವರ್ತಿಸಿ ಯಾವುದೇ ಸನ್ನಿವೇಶವನ್ನು ತಮಗೆ ಇಷ್ಟವಾದಂತೆ ಬದಲಾಯಿಸುತ್ತಾರೆ. ಆಸೆ ಆಕಾಂಕ್ಷೆಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರಲ್ಲಿ ಕಲ್ಮಶ ಗುಣ ಇರುವುದಿಲ್ಲ. ಇವರ ಪರಿಶುದ್ದವಾದ ನಡೆ, ನುಡಿ ಸಮಾಜದಲ್ಲಿ ಉನ್ನತ ಗೌರವ ಗಳಿಸಿ ಕೊಡುತ್ತದೆ. ಇವರಲ್ಲಿ ವಿಶೇಷವಾದ ಹೊಂದಾಣಿಕೆಯ ಗುಣವಿರುತ್ತದೆ. ಐಶ್ವರ್ಯ, ಪ್ರತಿಷ್ಠೆಗಳಿಗೆ ಪ್ರಾಧಾನ್ಯತೆ ನೀಡುವುದಿಲ್ಲ. ಇವರು ಇವರಿಗಿಂತ ಚಿಕ್ಕ ವಯಸ್ಸಿನ ಜನರನ್ನು ಸಹ ಅವಮಾನಿಸುವುದಿಲ್ಲ. ಇವರು ಅತಿಥಿಗಳ ಸತ್ಕಾರ ಮಾಡುವುದರಲ್ಲಿ ಮೊದಲಿಗರು. ಅನಾವಶ್ಯಕವಾಗಿ ಪ್ರವಾಸ ಮಾಡುವುದನ್ನು ಇಷ್ಟಪಡುವುದಿಲ್ಲ.

ಸಾಮಾನ...